ಕರ್ನಾಟಕ

ಚೇರಂಗಾಲದ ಕಾವೇರಿ ಸನ್ನಿಧಿ ಅಭಿವೃದ್ಧಿಗೆ ನಿರ್ಧಾರ

ರಾಜ್ಯ(ಮಡಿಕೇರಿ) ನ.22 :- ಬ್ರಹ್ಮದೇವರು ಕವೇರ ಮುನಿಯ ತಪಸ್ಸನ್ನು ಮೆಚ್ಚಿ ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನು ಕವೇರ ಮುನಿಗೆ ಪ್ರಸಾದಿಸಿದ ಸ್ಥಳವೆಂದು ಪ್ರತೀತಿ ಇರುವ ಚೇರಂಗಾಲದ ಪೌರಾಣಿಕ ಹಿನ್ನೆಲೆಯ ‘ಕನ್ನಿ ಕುಂಡ್’ ಮತ್ತು ಕೆಲವು ದೇವಾಲಯಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಶ್ರೀ ಕನ್ನಿಕಾವೇರಿ ಸೇವಾ ಟ್ರಸ್ಟ್ ಮುಂದಾಗಿದೆ ಎಂದು ಟ್ರಸ್ಟ್‍ನ ಸಂಚಾಲಕ ಮುಲ್ಲೇಂಗಡ ಶಂಕರಿ ಪೊನ್ನಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೇರಂಗಾಲದ ಕನ್ನಿ ಕುಂಡ್  ಎನ್ನುವ ಪ್ರದೇಶದಲ್ಲಿ ಜಲಪಾತ ಮತ್ತು ನೀರಿನ ಕುಂಡಿಕೆ ಇದ್ದು, ಇದು ಕಾವೇರಿಯನ್ನು ಪಡೆದ ಸ್ಥಳವೆಂದು ಪೌರಾಣಿಕವಾಗಿ ಹೇಳಲಾಗುತ್ತಿದೆ. ಕನ್ನಿಕುಂಡ್ ಎಂಬ ಸ್ಥಳವನ್ನು 200 ವರ್ಷಕ್ಕೂ ಮೊದಲು ಕೊಡಗಿನ ಜನರು ಇಲ್ಲಿನ ದೇವಸ್ಥಾನಗಳೊಂದಿಗೆ ಪೂಜಿಸಿಕೊಂಡು ಬಂದಿದ್ದಾರೆ ಎನ್ನುವ ಉತ್ತರ ಸುವರ್ಣ ಪ್ರಶ್ನೆಯಲ್ಲಿ ತಿಳಿದು ಬಂದಿದೆ.  ಟಿಪ್ಪು ಸುಲ್ತಾನನ ಆಕ್ರಮಣದ ನಂತರ ಇಲ್ಲಿನ ಜನಾಂಗ ವಲಸೆ ಹೋದ ಬಗ್ಗೆ ಮಾಹಿತಿ ಇದೆ. 1964ನೇ ಇಸವಿಯಿಂದ ಗೌಡ ಜನಾಂಗದ ಹೊಸೂರು ಎಂ. ನಾಣಯ್ಯನವರು ದೈವ ಪ್ರೇರಣೆಯಂತೆ ಈ ಸ್ಥಳದಲ್ಲಿ ತಮ್ಮ ಶಕ್ತ್ಯಾನುಸಾರ ಧಾರ್ಮಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿನ ದೈವೀ ಶಕ್ತಿಯನ್ನು ಅರಿತು ನಮ್ಮ ಟ್ರಸ್ಟ್ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿದೆಯೆಂದು ಶಂಕರಿ ಪೊನ್ನಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಚೇಂದಂಡ ಚುಮ್ಮಿ ಪೂವಯ್ಯ, ಟ್ರಸ್ಟಿಗಳಾದ ನವೀನ್ ಬೆಳ್ಯಪ್ಪ ಹಾಗೂ ಪುಚ್ಚಿಮಂಡ ಬಬ್ಲು ಅಪ್ಪಯ್ಯ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: