ಮೈಸೂರು

ವಿಶ್ವ ಮಧುಮೇಹ ದಿನಾಚರಣೆ ನ.14ರಂದು

ಕುವೆಂಪುನಗರದ ಭಾನವಿ ಆಸ್ಪತ್ರೆಯ ವತಿಯಿಂದ ನ.14 ಅನ್ನು ‘ವಿಶ್ವ ಮಧುಮೇಹ ದಿನ’ ವನ್ನಾಗಿ ಆಚರಿಸಲಾಗುತ್ತದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎನ್. ವಿಜಯ್ ಚೆಲುವರಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಧುಮೇಹದ ಬಗ್ಗೆ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಅಂದು ಬೆಳಗ್ಗೆ 7 ಗಂಟೆಗೆ ಭಾನವಿ ಆಸ್ಪತ್ರೆಯಿಂದ 1.5 ಕಿಮೀ ವಾಕಥಾನ್ ಪ್ರಾರಂಭಿಸಿ, ನಂತರ ಭಾನವಿ ಆಸ್ಪತ್ರೆಯ ಬಳಿ ಅಂತ್ಯಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ  ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಈ ವರ್ಷ ‘ಕಣ್ಣುಗಳ ಮೇಲೆ ಮಧುಮೇಹದ ಪರಿಣಾಮ’ ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

Leave a Reply

comments

Related Articles

error: