ಮೈಸೂರು

ಕುವೆಂಪು ಕೃತಿಶೈಲ ಕೃತಿ ಲೋಕಾರ್ಪಣೆ

ನಾಡೋಜ ಡಾ. ದೇಜೆಗೌ ಅವರ ಕಾವ್ಯ ಮೀಮಾಂಸಕ ತೀ.ನಂ.ಶ್ರೀ ಮತ್ತು ಜಾನಪದ ವಿದ್ವಾಂಸ ಬಿ.ಎಸ್. ಭಟ್ಟ ಅವರ  ಶತಮಾನದ ಶಕಪುರುಷ ಡಾ. ದೇಜಗೌ ಮತ್ತು ಕುವೆಂಪು ಕೃತಿಶೈಲ ಕೃತಿಗಳನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು.

ಮೈಸೂರಿನ ಜಯಲಕ್ಷ್ಮಿಪುರಂನ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ಯಕ್ಷಗಾನ ವಿದ್ವಾಂಸರಾದ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೈಸೂರು ವಿವಿಯ ವಿಶ್ರಾಂತ ಕುಲಪತಿ ಡಾ.ಜೆ. ಶಶಿಧರ್ ಪ್ರಸಾದ್ ಮಾತನಾಡಿ ಗದ್ಯ ಹೋಯ್ತು, ಪದ್ಯ ಹೋಯ್ತು ಡುಂ-ಡುಂ- ಡುಂ ಎಂದು ಪ್ರಸ್ತುತ ಬದುಕಿನ ಬಗ್ಗೆ ಹಾಸ್ಯದ ಮೂಲಕವೇ ನೆರೆದಿದ್ದ ಜನರಿಗೆ ತಿಳುವಳಿಕೆ ಹೇಳಿದರು. ಕುವೆಂಪು ಹಾಗೂ ದೇಜಗೌ ಅವರು ಕನ್ನಡದ ಎರಡು ಕಣ್ಣುಗಳಿದ್ದಂತೆ. ಇಂದಿನ ಯುವ ಪೀಳಿಗೆಗೆ ಈ ಮೂರು ಗ್ರಂಥಗಳು ಕೂಡ ಮಾರ್ಗದರ್ಶಕವಾಗಿವೆ. ಯುವಜನತೆ ಇಂತಹ ಕೃತಿಗಳನ್ನು ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕುವೆಂಪು ಅವರು ಶತಮಾನದಲ್ಲಿ ಹುಟ್ಟಿದ ಶಕಪುರುಷ. ಕುವೆಂಪು ಇಂದಿನ ಸಮಾಜಕ್ಕೆ ಅನಿವಾರ್ಯವಾಗಿದ್ದರು ಎಂದು ಅವರನ್ನು ನೆನೆದು ಭಾವುಕರಾದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಪಕರಾದ ಡಾ.ಎಸ್.ಎನ್ ಹೆಗಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇನೋವೇಟಿವ್, ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ಚೇತನ್ ಬುಕ್ ಹೌಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

Leave a Reply

comments

Related Articles

error: