ಕರ್ನಾಟಕ

ಕಪ್ಪು ಬಿಳುಪು ಬಣ್ಣದ ಕಾಗದದಲ್ಲಿ ಪಹಣಿ ವಿತರಣೆ: ಜಿಲ್ಲಾಧಿಕಾರಿ ಸ್ವಷ್ಟನೆ

ರಾಜ್ಯ(ಚಾಮರಾಜನಗರ)ನ. 23:- ಸಾರ್ವನಿಕರಿಗೆ ಪಹಣಿಯನ್ನು ಕಪ್ಪು ಬಿಳುಪು ಲೀಗಲ್ ಗಾತ್ರದ ಕಾಗದದ ಮೇಲೆ ಮುದ್ರಿಸಿ ಪ್ರಸ್ತುತ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ಸ್ವಷ್ಟಪಡಿಸಿದ್ದಾರೆ.

ಕಂದಾಯ ಇಲಾಖೆಯಿಂದ ರೈತರಿಗೆ, ಸಾರ್ವಜನಿಕರಿಗೆ ಗಣಕೀಕೃತ ಪಹಣಿಗಳನ್ನು ವಿತರಿಸುವ ಸೌಲಭ್ಯವನ್ನು 2001ರಿಂದ ಜಾರಿಗೆ ತರಲಾಗಿದೆ. ಸರ್ಕಾರವು ಪ್ರಸ್ತುತ ಟೆಂಡರ್‍ದಾರರಿಂದ ನೀಲಿ ಬಣ್ಣದ ಪೂರ್ವಮುದ್ರಿತ ಪಹಣಿ ನಮೂನೆಯನ್ನು ಟೆಂಡರ್‍ದಾರರಿಂದ ಪಡೆದು ಸದರಿ ನಮುನೆಯಲ್ಲಿ ಭೂಮಿ ಡಾಟಾ ಬೇಸ್‍ನಿಂದ ಪಹಣಿಯ ಮಾಹಿತಿಯನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿತು. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಪಹಣಿ ಪತ್ರ ಮುದ್ರಿಸಲು ಪೂರ್ವ ಮುದ್ರಿತ ಪಹಣಿ ನಮೂನೆಗಾಗಿ ಸರ್ಕಾರವು ಸರಬರಾಜುದಾರ ಮೇಲೆ ಸಂಪೂರ್ಣವಾಗಿ ಅವಲಂಭಿತವಾಗಿತ್ತು. ಇದರಿಂದ ರೈತರಿಗೆ ಪಹಣಿಗಳ ತುರ್ತು ಅಗತ್ಯವಿದ್ದ ಸಂದರ್ಭದಲ್ಲಿ ಅಂದರೆ ಬ್ಯಾಂಕ್‍ಗಳಿಂದ ಅಥವಾ ಯಾವುದಾದರೂ ಸಂಸ್ಥೆಯಿಂದ ಸಾಲ ಪಡೆಯಲು, ಸರ್ಕಾರದಿಂದ ಪರಿಹಾರ ಪಡೆಯುವಾಗ ಬೆಳೆವಿಮೆಗಾಗಿ ಪೂರ್ವ ಮುದ್ರಿತ ಪಹಣಿ ನಮೂನೆಯ ಸರಬರಾಜಿನಲ್ಲಿ ಸ್ವಲ್ಪ ವಿಳಂಬವಾದರೂ ಸಹ ನಿಗದಿತ ಸಮಯದಲ್ಲಿ ರೈತರು ಅಥವಾ ಸಾರ್ವಜನಿಕರು ಪಹಣಿಯನ್ನು ಪಡೆಯಲು ಕಷ್ಟವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸದರಿ ತೊಂದರೆಯನ್ನು ಅರಿತ ಸರ್ಕಾರವು ಪೂರ್ವ ಮುದ್ರಿತ ಪಹಣೆ ನಮೂನೆಗಾಗಿ ಸರಬರಾಜುದಾರ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ತಂತ್ರಾಂಶದಲ್ಲಿಯೇ ಕಪ್ಪು ಬಿಳುಪು ಬಣ್ಣದಲ್ಲಿ ಲೀಗಲ್ ಗಾತ್ರದ ಕಾಗದದ ಮೇಲೆ ಪಹಣಿಯನ್ನು ಮುದ್ರಿಸಲು ಕ್ರಮ ಕೈಗೊಂಡಿದೆ. ಸದರಿ ಕಪ್ಪು ಬಿಳುಪು ಗಾತ್ರದ ಪಹಣಿಯಲ್ಲಿ ಈ ಹಿಂದೆ ನೀಡುತ್ತಿದ್ದ ಪಹಣಿಯಲ್ಲಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದ್ದು ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳಾದ ವಿಶೇಷ ಪಹಣಿ ಗುರುತಿನ ಸಂಖ್ಯೆ, ಕ್ರಮ ಸಂಖ್ಯೆ, ಬಾರ್ ಕೋಡ್, ಡಿಜಿಟಲ್ ಸಹಿಗಳನ್ನು ಒಳಗೊಳಡಿರುತ್ತದೆ ಹಾಗೂ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿರತ್ತದೆ. ಆದರಿಂದ ಕಪ್ಪು ಬಿಳುಪು ಬಣ್ಣದ ಲೀಗಲ್ ಗಾತ್ರದ ಕಾಗದದ ಮೇಲೆ ಮುದ್ರಿಸಿ ಪ್ರಸ್ತುತ ನೀಡಲಾಗುತ್ತದೆ.

ಆದುದರಿಂದ ಸಾರ್ವಜನಿಕರು ಈ ಬದಲಾಣೆಯನ್ನು ಗಮನದಲ್ಲಿರಿಸಿಕೊಂಡು ಯಾವುದೇ ಗೊಂದಲಕ್ಕೊಳಕಾಗಾಗದೇ ತಾಲೂಕು ಕಚೇರಿಯ ಭೂಮಿ ಕೇಂದ್ರದಲ್ಲಿ, ಅಟಲ್‍ಜೀ ಜನ ಸ್ನೇಹಿ ಕೇಂದ್ರಗಳಲ್ಲಿ ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ಸರ್ಕಾರದ ಪಹಣಿ ವಿತರಿಸಲು ಅನುಮತಿ ನೀಡಿರುವ ಖಾಸಗಿ ಕೇಂದ್ರಗಳಲ್ಲಿ ವಿತರಿಸುವ ಪಹಣಿ ಪತ್ರಗಳನ್ನು ಪಡೆದು ತಮ್ಮ ಅವಶ್ಯಕತೆಗಳಿಗೆ ಬಳಸಿಕೊಳ್ಳಬೇಕು.  ಪಹಣಿಯನ್ನು ನಿಗದಿತ ಸಮಯಕ್ಕೆ ಪಡೆಯಲು ಅನುಕೂಲವಾಗುವಂತೆ ಸಾರ್ವನಿಕರ ಹಿತದೃಷ್ಠಿಯಿಂದ ಪಹಣಿಯಲ್ಲಿ ಬದಲಾವಣೆಯನ್ನು ತರಲಾಗಿದೆ ಎಂದು ಜಿಲ್ಲಾಧಿಕಾರಿಗಳು  ತಿಳಿಸಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)

 

 

Leave a Reply

comments

Related Articles

error: