ಮೈಸೂರು

ಮೈತ್ರಿ ಸಪ್ತಾಹ ಕಾರ್ಯಕ್ರಮ ನ.14 ರಿಂದ

ಮೈಸೂರು ಮಕ್ಕಳ ಸಹಾಯವಾಣಿ 1098 ಸಂಸ್ಥೆಯು ನ.14 ರಿಂದ ನ.20 ರವರೆಗೆ ಮೈತ್ರಿ ಸಪ್ತಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ನಿಸರ್ಗ ಫೌಂಡೇಶನ್ ನಿರ್ದೇಶಕ ನಂಜುಂಡಯ್ಯ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನ.14ರಂದು ವಸ್ತಪ್ರದರ್ಶನ ಆವರಣ ಮುಂಭಾಗ ಮೈತ್ರಿ ಸಪ್ತಾಹ ಉದ್ಘಾಟನಾ ಕಾರ್ಯಕ್ರಮ, 15- ಪೊಲೀಸ್ ಇಲಾಖೆ ಮತ್ತು ಸರ್ಕಾರಿ ಇಲಾಖೆಗಳ ಭೇಟಿ ಹಾಗೂ ಸಹಿ ಸಂಗ್ರಹ, 16- ಸಮಾಜ ಕಾರ್ಯ ವಿಭಾಗ ಮೈಸೂರು ಮಹಾವಿದ್ಯಾಲಯದಲ್ಲಿ ಪ್ರಬಂಧ ಸ್ಪರ್ಧೆ, 17- ಟಿ.ನರಸೀಪುರದಲ್ಲಿ ಸಾರ್ವಜನಿಕ ಅರಿವಿನ ಕಾರ್ಯಕ್ರಮ, 18- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಕ್ಕಳ ಪಾಲನ ಸಂಸ್ಥೆಗಳ ಮೇಲ್ವಿಚಾರಕರು ಹಾಗೂ ಆಪ್ತಸಮಾಲೋಚಕರಿಗೆ ಆಪ್ತಸಮಾಲೋಚನೆ ಬಗ್ಗೆ ಕಾರ್ಯಾಗಾರ, 19- ನಾಗನಹಳ್ಳಿ, ಎಚ್.ಡಿ.ಕೋಟೆಯಲ್ಲಿ ಕಾಲೇಜು ಮತ್ತು ಶಾಲೆ ಅರಿವಿನ ಕಾರ್ಯಕ್ರಮ ಮತ್ತು 20- ಪಿರಿಯಾಪಟ್ಟಣದಲ್ಲಿ ಸಾರ್ವಜನಿಕ ಅರಿವಿನ ಕಾರ್ಯಕ್ರಮ ಮತ್ತು ಸರ್ಕಾರಿ ಇಲಾಖೆಗಳ ಭೇಟಿ ಸಹಿ ಸಂಗ್ರಹ – ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಓಡಿಪಿ ಸಂಸ್ಥೆಯ ಫಾ.ಅಲ್ಮೆಡಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆರ್.ಎಲ್.ಹೆಚ್.ಪಿ. ನಿರ್ದೇಶಕಿ ಸರಸ್ವತಿ, ಮಕ್ಕಳ ಕಲ್ಯಾಣ ಸಮಿತಿ ಅಧ‍್ಯಕ್ಷೆ ಶೀಲಖರೆ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ಪದ್ಮ ಹಾಜರಿದ್ದರು.

Leave a Reply

comments

Related Articles

error: