ಕರ್ನಾಟಕಪ್ರಮುಖ ಸುದ್ದಿಮೈಸೂರು

ಯಾವುದೇ ಹೇಳಿಕೆ ಕೊಟ್ಟರೂ ಟ್ರೋಲ್ ಮೂಲಕ ಎಲ್ಲವನ್ನೂ ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿ ಪ್ರತಾಪ್ ಸಿಂಹ ಅವರಿಗೆ ಲೀಗಲ್ ನೋಟೀಸ್ ನೀಡಿದ ಪ್ರಕಾಶ್ ರೈ

ರಾಜ್ಯ(ಬೆಂಗಳೂರು)ನ.23:-  ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಬಹುಭಾಷಾ ನಟ ಪ್ರಕಾಶ್ ರೈ  ಲೀಗಲ್ ನೋಟೀಸ್ ನೀಡಿದ್ದಾರೆ. ಯಾಕೆಂದರೆ ಯಾವುದೇ ಹೇಳಿಕೆ ಕೊಟ್ಟರೂ  ಟ್ರೋಲ್ ಮೂಲಕ ಎಲ್ಲವನ್ನೂ ಹತ್ತಿಕ್ಕಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನೋಟೀಸ್ ನೀಡಿದ್ದಾರೆ ಎನ್ನಲಾಗಿದೆ.

ಮಾನನಷ್ಟ ಮೊಕದ್ದಮೆಯ ನೋಟಿಸ್‌ ನೀಡಿದ ಪ್ರಕಾಶ್ ರೈ ಸಂಸದ ಪ್ರತಾಪ್‌ ಸಿಂಹ ಅವರ ಮೈಸೂರು ಕಚೇರಿಗೆ ಅಡ್ರೆಸ್‌ ಮಾಡಿ ನೋಟೀಸ್ ರವಾನೆ ಮಾಡಿದ್ದಾರೆ ಎನ್ನಲಾಗಿದೆ. ಪ್ರತಾಪ್ ಸಿಂಹ ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಕಾಮೆಂಟ್‌ ಮಾಡಿದ್ದರು ಎನ್ನಲಾಗಿದೆ. ಪ್ರಕಾಶ್ ರೈ, ಪ್ರತಾಪ್‌ ಸಿಂಹ ಅವರ ಕಾಮೆಂಟ್‌ ಹಾಗೂ ಪೋಸ್ಟ್ ಗಳ ಸ್ಕ್ರೀನ್‌ ಶಾಟ್‌ ಜೊತೆ ನೋಟಿಸ್‌ ಜಾರಿ ಮಾಡಿದ್ದು, ಯಾವುದೇ ಹೇಳಿಕೆಗಳನ್ನು ಕೊಟ್ಟರೂ, ಟ್ರೋಲ್ ಮೂಲಕ ಎಲ್ಲವನ್ನೂ ಹತ್ತಿಕ್ಕಲಾಗುತ್ತಿದ್ದು ಇದು ಒಂದು ರೀತಿಯ ಗೂಂಡಾ ಪ್ರವೃತ್ತಿಯಾಗಿದೆ. ನನ್ನ ರಿಯಲ್ ಲೈಫ್ ನಲ್ಲೂ ಖಳನಾಯಕ ಅಂತ ಕರೆಯಲು  ಆರಂಭಿಸಿದ್ದಾರೆ. ನೀನು ನಟನೇ ಅಲ್ಲ ತಮಿಳುನಾಡಿಗೆ ಹೋಗು ಎನ್ನುತ್ತಾರೆ. ಪದ್ಮಾವತಿ ಚಿತ್ರದ ನಟಿ ದೀಪಿಕಾ ಮೂಗು ಕತ್ತರಿಸುತ್ತೇವೆ ಎನ್ನತ್ತಾರೆಂದರೆ  ನಾವು ಎಲ್ಲಿಗೆ ತಲುಪಿದ್ದೀವಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜಸ್ಟ್ ಆಸ್ಕಿಂಗ್ ಹೆಸರಿನಲ್ಲಿ ನನ್ನ ಪ್ರತಿಭಟನೆ ಆರಂಭ ಮಾಡುತ್ತಿದ್ದೇನೆ.  ಮೊದಲು ಮೈಸೂರಿನ ಶಾಸಕ ಪ್ರತಾಪ್ ಸಿಂಹ ವಿರುದ್ಧ ಲೀಗಲ್ ನೋಟೀಸ್ ಕಳಿಸುತ್ತಿದ್ದೇನೆ. ಇದು ಯಾವುದೇ ಪಕ್ಷದ ವಿರುದ್ಧ ಅಲ್ಲ, ಕೇವಲ ವ್ಯಕ್ತಿಯ ವಿರುದ್ಧವಷ್ಟೇ. ನನ್ನ ಮಗನ ಸಾವನ್ನು ಅಣಕ ಮಾಡಿ ಟ್ರೋಲ್ ಮಾಡಿದರೆ, ನಾನು ಹೇಗೆ ಸಹಿಸಿಕೊಳ್ಳೋದು ಎಂದು ನೋಟಿಸ್‌ ನಲ್ಲಿ ಪ್ರಕಾಶ್‌ ರೈ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನ ವಹಿಸಿದ ಪ್ರಧಾನಿ ಮೋದಿ ಓರ್ವ ನಟ ಎಂದು ನಟ ಪ್ರಕಾಶ್ ರೈ ಹೇಳಿಕೆ ನೀಡಿದ್ದರು. ಇದನ್ನ ಖಂಡಿಸಿದ್ದ ಸಂಸದ ಪ್ರತಾಪ್ ಸಿಂಹ, ‘’ಮಗನ ಸಾವಿನ ದುಃಖದಲ್ಲಿದ್ದ ಹೆಂಡತಿಯನ್ನು ಬಿಟ್ಟು ಡ್ಯಾನ್ಸರ್ ಹಿಂದೆ ಓಡಿದ ರೈಯಂತಹವರು ಮೋದಿ-ಯೋಗಿಗೆ ಹೇಳುವಷ್ಟು  ಯೋಗ್ಯತೆ ಇರುವವರಾ?’’ ಎಂದು ಫೇಸ್ ಬುಕ್ ನಲ್ಲಿ ಕಾಮೆಂಟ್ ಮಾಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: