ಮೈಸೂರು

ರಸ್ತೆಬದಿಯ ಗೋಡೆಗೆ ಬೈಕ್ ಡಿಕ್ಕಿ : ಕೈಕಾಲು ಮುರಿತ

ಮೈಸೂರು,ನ.23:- ನಂಜನಗೂಡು ತಾಲೂಕಿನ ಪಾಳ್ಯ ಗ್ರಾಮದ ಸಮೀಪ ರಸ್ತೆಬದಿಯ ಗೋಡೆಗೆ ಬೈಕಿನಲ್ಲಿ ಬಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ಕೈಕಾಲು ಮುರಿದಿದಿದ್ದು, ಇನ್ನೊಬ್ಬನ  ತಲೆಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.

ಮೂವರು ಕಂಠಪೂರ್ತಿ ಕುಡಿದು ಒಂದೇ ಬೈಕಿನಲ್ಲಿ ತ್ರಿಬಲ್ ರೈಡಿಂಗ್‍ನಲ್ಲಿ ಸಾಗಿದ್ದು ಅಜಾಗರೂಕತೆಯಿಂದ ಬೈಕ್ ಚಲಾಯಿಸಿ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಬಿದ್ದ ಪರಿಣಾಮ ಇಬ್ಬರಿಗೆ ಕೈಕಾಲು ಮುರಿದರೆ, ಮತ್ತೊಬ್ಬನಿಗೆ ತಲೆಯ ಭಾಗದಲ್ಲಿ ಗಂಭೀರ ಗಾಯವಾಗಿದೆ. ಮೂವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಿದ್ದಾರೆ ಎನ್ನಲಾಗಿದೆ. ಸಂಚಾರಿ ಪೊಲೀಸರು ಬೈಕನ್ನು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: