ಮೈಸೂರು

ಕೆಎಸ್ಆರ್ ಟಿಸಿ ಬಸ್ ನ ಆಕ್ಸೆಲ್ ಮುರಿದು ಬಸ್ ಜಖಂ

ಮೈಸೂರು,(ಬೈಲಕುಪ್ಪೆ),ನ.23-ಕೆಎಸ್ಆರ್ ಟಿಸಿ ಬಸ್ ನ ಆಕ್ಸೆಲ್ ಮುರಿದ ಪರಿಣಾಮ ಬಸ್ ನ ಹಿಂಬದಿಯ ಎರಡು ಚಕ್ರಗಳು ಆಕ್ಸೆಲ್ ಸಮೇತ ಕಳಚಿ ಬಸ್ ಜಖಂಗೊಂಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಬಳಿ ನಡೆದಿದೆ.

ಘಟನೆಯಲ್ಲಿ ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯಾದಿಂದ ಪಾರಗಿದ್ದು, ಮುಂಬದಿಯ ಬಾಗಿಲ ಮೂಲಕ ಪ್ರಯಾಣಿಕರು ಬಸ್ ನಿಂದ ಹೊರಬಂದಿದ್ದಾರೆ. ಸ್ಥಳಕ್ಕೆ ಸಾರಿಗೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. (ವರದಿ-ಆರ್.ಬಿ.ಆರ್, ಎಂ.ಎನ್)

Leave a Reply

comments

Related Articles

error: