ದೇಶಪ್ರಮುಖ ಸುದ್ದಿ

ಬಹುಭಾಷಾ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ; ದಿಲೀಪ್ ಹೊಂದಿದ್ದ ಅನೈತಿಕ ಸಂಬಂಧವೇ ಕಾರಣ: ಎಸ್ಐಟಿ

ಕೇರಳ,ನ.23-ಬಹುಭಾಷಾ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ನಟ ದಿಲೀಪ್ ಹೊಂದಿದ್ದ ಅನೈತಿಕ ಸಂಬಂಧವೇ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಲು ಕಾರಣ ಎಂದು ಅಂಗಮಾಲಿ ಜುಡಿಶಿಯಲ್ ಮೊದಲನೇ ದರ್ಜೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಂತಿಮ ವರದಿಯಲ್ಲಿ ತಿಳಿಸಲಾಗಿದೆ.

ಬಹುಭಾಷಾ ನಟಿ ದಿಲೀಪ್ ಅವರು ಕಾವ್ಯಾ ಮಾಧವನ್ ಜತೆ ಹೊಂದಿದ್ದ ಅನೈತಿಕ ಸಂಬಂಧದ ಬಗ್ಗೆ ಡಿಜಿಟಲ್ ಸಾಕ್ಷ್ಯವನ್ನು ಅವರ ಆಗಿನ ಪತ್ನಿ ಮಂಜು ವಾರಿಯರ್ ಗೆ ನೀಡಿದ್ದರಿಂದ ದಿಲೀಪ್ ಆಕೆಯ ವಿರುದ್ಧ ಹಗೆ ಸಾಧಿಸಿದ್ದರು ಎಂದು ವರದಿಯಲ್ಲಿ ತಿಳಿಸಿದೆ.

ಎಂಟನೇ ಆರೋಪಿ ನಟ ದಿಲೀಪ್ ಮೊದಲನೇ ಆರೋಪಿ ಪಲ್ಸರ್ ಸುನಿ ಅಲಿಯಾಸ್ ಸುನಿಲ್ ಕುಮಾರ್ ಸುರೇಂದ್ರನ್ ಜತೆ ಸಂಚು ರೂಪಿಸಿ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬುದಕ್ಕೆ ಸಾಂದರ್ಭಿಕ ಸಾಕ್ಷ್ಯಗಳನ್ನು ತನಿಖಾ ತಂಡ ಅವಲಂಬಿಸಿದೆ.

ದೌರ್ಜನ್ಯಕ್ಕೊಳಗಾದ ನಟಿಯನ್ನು ಮೊದಲ ಸಾಕ್ಷಿ ಎಂದು ಪರಿಗಣಿಸಲಾಗಿದ್ದು, ದಿಲೀಪ್ ಮಾಜಿ ಪತ್ನಿ ಮಂಜು ವಾರಿಯರ್ ಅವರನ್ನು 11ನೇ ಸಾಕ್ಷಿ ಹಾಗೂ ಈಗಿನ ಪತ್ನಿ ಕಾವ್ಯ ಮಾಧವನ್ ಅವರನ್ನು 34ನೇ ಸಾಕ್ಷಿ ಎಂದು ಪರಿಗಣಿಸಲಾಗಿದೆ. ಚಿತ್ರರಂಗದ 50 ಮಂದಿ ಇತರರನ್ನು ಸಾಕ್ಷಿಗಳೆಂದು ಹೆಸರಿಸಲಾಗಿದೆ.

ಒಟ್ಟು 1,652 ಪುಟಗಳ ಆರೋಪ ಪಟ್ಟಿಯಲ್ಲಿ 355 ಮಂದಿಯನ್ನು ಸಾಕ್ಷಿಗಳನ್ನಾಗಿ ಹಾಗೂ ಅಪ್ರೂವರ್ ಗಳನ್ನಾಗಿ ಹೆಸರಿಸಲಾಗಿದೆ. ಚಿತ್ರರಂಗದ ಇತರರಲ್ಲೂ ಆರೋಪಿ ದಿಲೀಪ್  ಬಹುಭಾಷಾ ನಟಿಯ ವಿರುದ್ಧ ಹೊಂದಿದ ದ್ವೇಷದ ಬಗ್ಗೆ ಹೇಳಿಕೊಂಡಿದ್ದರು ಎಂಬುದನ್ನೂ ಉಲ್ಲೇಖಿಸಲಾಗಿದೆ. ಸಂತ್ರಸ್ತೆಯ ಚಿತ್ರಜೀವನವನ್ನು ಹಾಳುಮಾಡಲು ನಟ ದಿಲೀಪ್ ಯತ್ನಿಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ನಟಿಯ ವಿರುದ್ಧ ಬಹಳ ಕಾಲದಿಂದ ಸಂಚು ನಡೆದಿತ್ತೆಂಬುದು ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ದಿಲೀಪ್ ಜತೆ ಜೈಲಿನಲ್ಲಿದ್ದ ಜಿನ್ಸನ್ ಮುಖಾಂತರ ತನಿಖಾ ತಂಡಕ್ಕೆ ತಿಳಿದು ಬಂದಿತ್ತು.

ಪಲ್ಸರ್ ಸುನಿ ಹಾಗೂ ದಿಲೀಪ್ ಹೊರತಾಗಿ ಮಾರ್ಟಿನ್, ಮಣಿಕಂಠನ್, ವಿಘ್ನೇಶ್, ಸಲೀಂ, ಪ್ರದೀಪ್, ಚಾರ್ಲಿ ಥಾಮಸ್, ರಾಜು ಜೋಸೆಫ್, ಪ್ರತೀಶ್ ಚಾಕೋ ಹಾಗೂ ಸುನಿ ಜತೆ ಜೈಲಿನಲ್ಲಿದ್ದ ವಿಷ್ಣು ಹಾಗೂ ಮಸ್ತ್ರಿ ಸುನಿಲ್ ಸೇರಿದ್ದಾರೆ. ಇತರ ಇಬ್ಬರು ಆರೋಪಿಗಳಾದ ವಿಪಿನ್ ಲಾಲ್ ಹಾಗೂ ಪಿ ಕೆ ಅನೀಶ್ ಅಪ್ರೂವರ್ ಗಳಾಗಿದ್ದಾರೆ. (ವರದಿ-ಎಂ.ಎನ್)

 

 

Leave a Reply

comments

Related Articles

error: