ಸುದ್ದಿ ಸಂಕ್ಷಿಪ್ತ

ಹೊಲಿಗೆ ತರಬೇತಿ ಉದ್ಘಾಟನೆ

ಗಾರ್ಡ್ ಸಂಸ್ಥೆ ಮತ್ತು ಮೈಸೂರು ಮತ್ತು ಎಲ್‍ ಆ್ಯಂಡ್ ಟಿ ಮೈಸೂರು ಸಹಯೋಗದಲ್ಲಿ ನೀಡುತ್ತಿರುವ ಮೂರು ತಿಂಗಳ ಉಚಿತ ತರಬೇತಿ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.ಮೈಸೂರಿನ ಲಕ್ಷ್ಮೀಕಾಂತ ನಗರದಲ್ಲಿರುವ ಸ್ತ್ರೀಶಕ್ತಿ ಭವನದಲ್ಲಿ ಪಾಲಿಕೆ ಸದಸ್ಯರಾದ ಶಿವಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಮೈಸೂರು ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶಂಕರೇಗೌಡ, ಗಾರ್ಡ್ ಸಂಸ್ಥೆ ಅಧ್ಯಕ್ಷ ಡಾ.ಆರ್. ನಾಗರಾಜು ಮತ್ತು ಕಾರ್ಯದರ್ಶಿಗಳಾದ ಎಮ್.ಎಲ್. ಸುದರ್ಶನ ರಾಜು ಭಾಗವಹಿಸಿದ್ದರು.

Leave a Reply

comments

Related Articles

error: