ಪ್ರಮುಖ ಸುದ್ದಿಮೈಸೂರು

ಅಕ್ಷರ ಜಾತ್ರೆಯ ಆಕರ್ಷಕ ಮೆರವಣಿಗೆಗೆ ಚಾಲನೆ

ಮೈಸೂರು,ನ.24:- ಮಲ್ಲಿಗೆ ನಗರಿ ಮೈಸೂರಿನಲ್ಲಿ ಕನ್ನಡ ಜಾತ್ರೆಯ ಮೆರವಣಿಗೆಗೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಚಾಲನೆ ನೀಡಲಾಗಿದ್ದು, ಕನ್ನಡ ಜಾತ್ರೆಯ ಆಕರ್ಷಕ ಮೆರವಣಿಗೆ ಜನಮನವನ್ನು ಆಕರ್ಷಿಸುತ್ತಿದೆ.

ಮೆರವಣಿಗೆಯು ವಿವಿಧ ಜಾನಪದ ಕಲಾತಂಡಗಳು, ಹುಲಿವೇಷ, ಸೀರೆ, ಶರ್ಟ್ ಧೋತಿ ಧರಿಸಿದ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿಯರನ್ನೊಳಗೊಂಡಿದೆ. ಎತ್ತಿನ ಗಾಡಿ ವಿವಿಧ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು. ಕನ್ನಡ ಪ್ರೇಮಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿದರು. ನಂದಿ ಧ್ವಜ, ಕುದುರೆ ಸಾರೋಟು, ಕಂಸಾಳೆ , ಡೊಳ್ಳು ಕುಣಿತ,ವೀರಗಾಸೆ ,ನಾಡಿನ ವಿವಿಧ ಜಾನಪದ ಕಲಾತಂಡಗಳು,ಸ್ತಬ್ಧಚಿತ್ರಗಳು ಮತ್ತು ಸಹಸ್ರಾರು ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ದೇಶಿಯ ಉಡುಗೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಗಾಂಧಿ ವೃತ್ತ, ಸಯ್ಯಾಜಿರಾವ್, ರಸ್ತೆ, ಕೆ.ಆರ್.ವೃತ್ತ, ಬನುಮಯ್ಯ ಕಾಲೇಜು ರಸ್ತೆ, ಅಂಡರ್ ಫೀಟ್ ರಸ್ತೆ ಮೂಲಕ ಮಹಾರಾಜ ಕಾಲೇಜನ್ನು ತಲುಪಲಿದೆ. ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಮೆರವಣಿಗೆಯನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಕೆ.ಆರ್.ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಕನ್ನಡ ಧ್ವಜದ ಕೆಂಪು-ಹಳದಿ ಬಣ್ಣದ ಶಾಲು ಧರಿಸಿ ಗಮನ ಸೆಳೆದರಲ್ಲದೇ, ಮೆರವಣಿಗೆಯನ್ನು ವೀಕ್ಷಿಸಿದರು. ಅಷ್ಟೇ ಅಲ್ಲದೇ ಸರಿಯಾಗಿ ಸಾಲಿನಲ್ಲಿ ಸಾಗುವಂತೆ ತಿಳಿಸಿದರು.  ಅಕ್ಷರ ಜಾತ್ರೆಯ ಆಕರ್ಷಕ ಮೆರವಣಿಗೆಗೆ ಚಾಲನೆ ಕನ್ನಡಪರ ಸಂಘಟನೆಗಳು ವಿದ್ಯಾರ್ಥಿಗಳ ಕೈಗೆ ಕನ್ನಡ ಬಾವುಟಗಳನ್ನು ನೀಡಿದರು.(ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: