ಕರ್ನಾಟಕ

ಪರಿಸರ ಉಳಿಸಲು ಗಿಡಗಳನ್ನು ಬೆಳೆಸಿದರೆ ನಮ್ಮ ದೇಶ ಪರಿಸರದಲ್ಲಿ ಮೊದಲನೆ ಸ್ಥಾನವನ್ನು ಪಡೆಯಬಹುದು : ಆರ್.ವಿ. ಶಾಂತಿಪ್ರಸಾದ್‍

ರಾಜ್ಯ(ಚಾಮರಾಜನಗರ)ನ.24:-  ಎಲ್ಲ ಖಾಸಗಿ ಕಂಪನಿಗಳು ಪರಿಸರ ಉಳಿಸಲು ಗಿಡಗಳನ್ನು ಬೆಳೆಸಿದರೆ ನಮ್ಮ ದೇಶ ಪರಿಸರದಲ್ಲಿ ಮೊದಲನೆ ಸ್ಥಾನವನ್ನು ಪಡೆಯಬಹುದು ಎಂದು ಮಹಾವೀರ ಟ್ರೆಡರ್ಸ್‍ನ ಮಾಲೀಕ ಆರ್.ವಿ. ಶಾಂತಿಪ್ರಸಾದ್‍ತಿಳಿಸಿದರು.

ನಗರದ ಉಪ್ಪಾರ ಬಡಾವಣೆಯಲ್ಲಿ ಈಶ್ವರಿ ಸ್ಕೂಲ್ ಆಫ್ ಮ್ಯೂಜಿಕ್ ಅಕಾಡೆಮಿ ಹಾಗೂ ನ್ಯೂ ಹಾಲೆಂಡ್ ಟ್ಯಾಕ್ಟರ್ಸ್ ಚಾಮರಾಜನಗರ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ 50 ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಬೇಸಿಗೆ ಕಾಲದಲ್ಲಿ ತಾಪಮಾನವು ಕಡಿಮೆಯಾಗಬೇಕಾದರೆ ಮರಗಳ ಅವಶ್ಯಕತೆ ಎಲ್ಲರಿಗೂ ಇದೆ. ಚಾಮರಾಜನಗರ ಜಿಲ್ಲೆಯು ಶೇ 75 ಭಾಗ ಕಾಡು ಪ್ರದೇಶ ಇದೆ ಇದರೊಂದಿಗೆ ಸಾರ್ವಜನಿಕರು ಮನೆಗೊಂದು ಗಿಡ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದರೆ ಉತ್ತಮ ಪರಿಸರವನ್ನು ನಮ್ಮ ಮುಂದಿನ ಪಿಳಿಗೆಗಳಿಗೆ ಉಳಿಸಬಹುದಾಗಿದೆ ಎಂದು ತಿಳಿಸಿದರು. ಈಶ್ವರಿ ಸ್ಕೂಲ್ ಆಫ್ ಮ್ಯೂಜಿಕ್ ಅಕಾಡೆಮಿ ಸಂಸ್ಥಾಪಕ ಸಿ.ಎಂ. ವೆಂಕಟೇಶ್ ಮಾತನಾಡಿ ನಮ್ಮ ಅಕಾಡೆಮಿ ವತಿಯಿಂದ ಪರಿಸರವನ್ನು ಉಳಿಸುವ ಸಲುವಾಗಿ ಚಲನಚಿತ್ರ ನಟರ, ಪ್ರಸಿದ್ದ ಸಾಹಿತಿ ಮತ್ತು ಗಾಯಕರ ಹುಟ್ಟು ಹಬ್ಬದಂದು ನಗರದ ವಿವಿಧ ಬಡಾವಣೆಗಳಲ್ಲಿ ಸಾಲು ಗಿಡಗಳನ್ನು ನೆಟ್ಟು ಬೆಳೆಸಿ ಪೊಷಿಸುವ ಕಾರ್ಯವನ್ನು ಮಾಡುತ್ತ ಬಂದಿದ್ದೇವೆ ಇಲ್ಲಿಯ ವರೆಗೆ 850 ಗಿಡಗಳನ್ನು ನಮ್ಮ ಸಂಸ್ಥೆಯ ವತಿಯಿಂದ ನೆಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಬಂಗಾರು, ನ್ಯೂಹಾಲೆಂಡ್ ಕಂಪನಿ ಮುಖ್ಯಸ್ಥರಾದ ಶಿವರಾಜ್‍ಪಾಟೀಲ್, ಮಹದೇವಸ್ವಾಮಿ, ಅಭಿ, ವಿನಯ್, ಚಾ.ಹ ಬಸವರಾಜು, ಶಿವರಾಮಶೆಟ್ಟಿ ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: