ದೇಶಪ್ರಮುಖ ಸುದ್ದಿ

ತಾಜ್‍ಮಹಲ್‍ನಲ್ಲಿ ನಮಾಜ್ ಮಾಡಲು ಅವಕಾಶ ನೀಡದಂತೆ ರಾಷ್ಟ್ರಪತಿಗೆ ಮನವಿ!

ಸಾಗರ (ನ.24): “ತಾಜ್‍ಮಹಲ್‍ಗೆ ಹಾಕಿರುವ ಬೀಗ ತೆಗೆದು ಅದು ಹಿಂದೂಗಳ ಕಟ್ಟಡವೇ ಅಥವಾ ಮುಸಲ್ಮಾನರದ್ದೇ ಎಂದು ಸಂಶೋಧನೆ ನಡೆಸಿ ತಿಳಿದುಕೊಳ್ಳಬೇಕು. ಅಲ್ಲಿಯವರಗೆ ಅಲ್ಲಿ ನಮಾಜ್ ಮಾಡಲು ಅವಕಾಶ ನೀಡಬಾರದು” ಎಂದು ಒತ್ತಾಯ ಮಾಡಿ ರಾಷ್ಟ್ರೀಯ ಹಿಂದೂ ಆಂದೋಲನಾ ಸಮಿತಿ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಗಿದೆ.

ತಾಜ್‍ಮಹಲ್ ಮುಮ್ತಾಜ್ ಘೋರಿಯೋ ಅಥವಾ ಹಿಂದೂ ವಾಸ್ತುಕಲೆಯ ಸರ್ವೋತ್ತಮ ಮಾದರಿಯೋ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇತಿಹಾಸ ತಜ್ಞರ ಸಮಿತಿಯನ್ನು ನೇಮಿಸಿ, ಸೀಮಿತ ಅವಧಿಯಲ್ಲಿ ವರದಿ ಹೊರಗೆ ಬರುವಂತೆ ಕೇಂದ್ರ ಸರ್ಕಾರ ಗಮನಹರಿಸಬೇಕು. ವರದಿ ಹೊರಗೆ ಬರುವವರೆಗೆ ಇಲ್ಲಿ ನಮಾಜ್ ಪಠಣ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.

ಅಯೋಧ್ಯೆಯ ಬಾಬರಿ ಮಸೀದಿ ಕೆಡವಿದ ಬಳಿಕ ಆ ಸ್ಥಳದಲ್ಲಿ ಉತ್ಖನನ ನಡೆಸಿದಾಗ ಅಲ್ಲಿ ಸಿಕ್ಕಿರುವ ಪುರಾವೆಗಳಿಂದ ಶ್ರೀರಾಮ ದೇವಸ್ಥಾನ ಇದ್ದದ್ದು ಪತ್ತೆಯಾಯ್ತು. ತಾಜ್‍ಮಹಲ್ ಉತ್ಖನನ ನಡೆಸಿದರೆ ಅನೇಕ ಅಪ್ರಕಾಶಿತ ವಿಷಯಗಳು ಬೆಳಕಿಗೆ ಬರಬಹುದು. ಆದ್ದರಿಂದ ಪುರಾತತ್ವ ಇಲಾಖೆ ಅಧಿಕಾರಿಗಳು, ಪೊಲೀಸರು, ನಿವೃತ್ತ ನ್ಯಾಯಾಧೀಶರು, ಪತ್ರಕರ್ತರು, ಧಾರ್ಮಿಕ ಕ್ಷೇತ್ರದಲ್ಲಿನ ಪ್ರಮುಖರು ಸಮಕ್ಷಮದಲ್ಲಿ ಬೀಗ ಹಾಕಿರುವ ಕೋಣೆಯನ್ನು ತೆರೆದು ಎಲ್ಲರಿಗೂ ಪ್ರವೇಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

(ಎನ್‍ಬಿಎನ್‍)

Leave a Reply

comments

Related Articles

error: