ಕರ್ನಾಟಕಮೈಸೂರು

ಕನ್ನಡ ಚಳುವಳಿ ನಿರಂತರವಾಗಿ ನಡೆಯುತ್ತಲೆ ಇರಬೇಕು: ಚಂದ್ರಶೇಖರ್ ಪಾಟೀಲ

ಮೈಸೂರು (ನ.24): ಕನ್ನಡಿಗರೆಲ್ಲ ಅರಿತುಕೊಂಡ ಒಂದು ವಾಸ್ತವವಂತೂ ಇದೆ. ನಮಗೂ ಚಳುವಳಿಗೂ ಬಿಡಲಾರದ ನಂಟು. ಕನ್ನಡಚಳುವಳಿ ನಿರಂತರವಾಗಿ ನಡೆಯುತ್ತಲೆ ಇರಬೇಕು ಎಂದು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲ ಅವರು ಹೇಳಿದರು.

ಕನ್ನಡ ಪ್ರಜ್ಞೆಯೇ ಅಪ್ಪಟ ಜಾತ್ಯತೀತವಾದುದು. ಜಾತಿ-ಧರ್ಮಗಳ ಹೆಸರಲ್ಲಿ ಸಮಾವೇಶಗೊಳ್ಳುವುದು ಸಮಾಜದ ವಿಘಟನೆಯ ಸಂಕೇತ. ಪರಧರ್ಮ ಸಹಿಸ್ಣತೆ ಮತ್ತು ಜಾತ್ಯತೀತ ನಿಲುವು ಕನ್ನಡ ಪ್ರಜ್ಞೆಯ ಭಾಗವಾಗಿದ್ದರಿಂದ ಸಹಜವಾಗಿಯೇ ಸಾಮಾಜಿಕ ನ್ಯಾಯ ಪರಿಕಲ್ಪನೆ ಆಚರಣೆಯಲ್ಲಿ ಬಂದಿದೆ ಎಂದರು.

ವಚನ ಚಳುವಳಿ ಅಕ್ಷರಃ ತತ್ವಾಧಾರಿತ ಸಂಘಟನೆ. ಬಸವಣ್ಣನವರದ್ದು “ಇವ ನಮ್ಮವ ಇವ ನಮ್ಮವ” ಎಂದು ಎಲ್ಲರನ್ನು ಒಳಗೊಳ್ಳುವ ಬಹು ದೊಡ್ಡ ಜನಾಂದೋಲನ, ಈ ಪರಂಪರೆಯ ಮುದುವರಿಕೆಗಾಗಿ ಮೈಸೂರು ಸಂಸ್ಥಾನದ ಅರಸರು ರಾಜಶಾಹಿ ವ್ಯವಸ್ಥೆಯಲ್ಲೂ ಜನತಂತ್ರದ ಬೆಳೆ ಬೆಳೆದರು. ಕನ್ನಡ ಸಾಹಿತ್ಯ ಪರಿಷತ್ತಿನಂತಹ ಒಂದು ಸಾಂಸ್ಕøತಿಕ ಸಂಘಟನೆ ಹುಟ್ಟು ಹಾಕುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಪ್ರಜ್ಞೆ ಮತ್ತಷ್ಟು ಕ್ರಿಯಾಶೀಲ ವಾಗುವಂತೆ ನೋಡಿಕೊಂಡರು ಎಂದು ತಿಳಿಸಿದರು.

ಮೊದಲ ದಿನ “ಅಧ್ಯಕ್ಷೀಯ” ಭಾಷಣ ಬಿಗಿದರೆ ಸಾಲದು ಉಳಿದ ಮೂರು ದಿನವೂ ಪ್ರಧಾನ ವೇದಿಕೆ ಮತ್ತು ಸಮಾನಾಂತರ ವೇದಿಕೆಯ ಗೋಷ್ಠಿಗಳನ್ನೂ ಹಾಜರಾತಿ ಇರಬೇಕು. ಆ ಕೆಲಸ ನಾನು ಮಾಡುವೆ ಎಂದರು.

ಇದು ಮೈಸೂರಿನಲ್ಲಿ ನಡೆಯುತ್ತಿರುವ 5ನೇ ಸಮ್ಮೇಳನ. ಕರ್ನಾಟಕ ಏಕೀಕರಣಕ್ಕೆ ಮುನ್ನ ಮೂರು ಸಮ್ಮೇಳನ ಹೆಚ್.ವಿ ನಂಜುಂಡಯ್ಯ, ಆಲೂರು ವೆಂಕಟರಾಯರು ಮತ್ತು ಶಿವರಾಮ ಕಾರಂತರು ಅಧ್ಯಕ್ಷರಾಗಿದ್ದರು. ಏಕೀಕರಣದ ನಂತರ ಕೆ.ಎಸ್.ನರಸಿಂಹಸ್ವಾಮಿ ಈ ಮಹಾನುಭಾವರ ಪಟ್ಟಿಗೆ ನನ್ನದು ಹೆಸರು ಸೇರಿತ್ತಲ್ಲ ಎಂಬ ಖುಷಿ ನನ್ನದು.

ನಾವೆಲ್ಲ ನವೋದಯ, ಪ್ರಗತಿಶೀಲ, ನವ್ಯ ಎಂದು ಸಾಹಿತ್ಯ ಕಾಲ ಘಟ್ಟಗಳನ್ನು ಗುರುತ್ತಿಸುತ್ತೇವೆ. ನಮ್ಮ ಸಾಹಿತ್ಯ ಚೇತನಗಳೆ ಕಟ್ಟಿದ ಜನತಾಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಆಗಿನ ಮೈಸೂರು ಅರಸg ಸಕಲ ಬಗೆಯ ಪ್ರೋತ್ಸಾಹವೂ ಇತ್ತು. ದಲಿತ ಬಂಡಾಯದ ಪರ್ವ ಶುರುವಾದಾಗಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗಳ ವಿನ್ಯಾಸಗಳಾಗಲಿ, ಸಮ್ಮೇಳನಗಳ ಸ್ವರೂಪಗಳಾಗಲಿ, ದಲಿತ ಬಂಡಾಯದ ದಟ್ಟ ಪ್ರಭಾವಕ್ಕೆ ಒಳಗಾಗುತ್ತಿರುವುದು ಸ್ಪಷ್ಟ ಎಂದು ತಿಳಿಸಿದರು.

(ಎನ್‍ಬಿಎನ್‍)

Leave a Reply

comments

Related Articles

error: