ಸುದ್ದಿ ಸಂಕ್ಷಿಪ್ತ

ದತ್ತ ಜಯಂತಿ ಆಚರಣೆ

ಮೈಸೂರು,ನ.25:- ನಗರದ ಗೋಕುಲಂ ಮೂರನೇ ಹಂತದ 6ನೇ ಮುಖ್ಯರಸ್ತೆಯಲ್ಲಿರುವ ಚಿನ್ಮಯ ಮಿಶನ್ ನಲ್ಲಿ ನ.26ರಿಂದ ಡಿ.3ರವರೆಗೆ ದತ್ತ ಜಯಂತಿಯನ್ನಾಚರಿಸಲಾಗುತ್ತಿದೆ.

ಡಿ.3ರ ಮಾರ್ಗಶಿರ ಹುಣ್ಣಿಮೆಯ ದಿನ ದತ್ತಜಯಂತಿಯನ್ನು ಭಾರತದಾದ್ಯಂತ ಆಚರಿಸಲಾಗುತ್ತಿದ್ದು, ನ.29ರಂದು ಗೀತಾ ಮತ್ತು ತಪೋವನ ಜಯಂತಿ, ಸಂಜೆ 4ರಿಂದ 8ರವರೆಗೆ ಭಗವದ್ಗೀತೆಯ 18ಅಧ್ಯಾಯಗಳ ಪಠಣ, ಪಾದುಕಾ ಡಿ.3ರ ದತ್ತ ಜಯಂತಿಯಂದು ವಿಶೇಷ ಪೂಜೆಗಳು ನಡೆಯಲಿವೆ. (ಎಸ್.ಎಚ್)

Leave a Reply

comments

Related Articles

error: