ಮೈಸೂರು

ಸಾಹಿತ್ಯಾಸಕ್ತರಿಗೆ ಉಚಿತ ಪ್ರವಾಸ

ಮೈಸೂರು.ನ.25:- ಪ್ರವಾಸೋದ್ಯಮ ಇಲಾಖೆಯಿಂದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿರುವ  ಸಾಹಿತ್ಯಾಸಕ್ತರಿಗೆ ಕವಿರಾಜಮಾರ್ಗ  ಉಚಿತ ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಪ್ರವಾಸೋದ್ಯಮ ಉಪನಿರ್ದೇಶಕರಾದ ಜನಾರ್ಧನ್ ಚಾಲನೆ ನೀಡಿದರು.  ಈ ಪ್ರವಾಸದಲ್ಲಿ ಮೈಸೂರಿನಲ್ಲಿರುವ ಕುವೆಂಪು ಮನೆ, ಆರ್.ಕೆ ನಾರಾಯಣ್ ಅವರ ಸಂಗ್ರಹಾಲಯ , ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಹಾಗೂ ರಂಗಾಯಣಕ್ಕೆ ಭೇಟಿ ನೀಡಿ ಅಲ್ಲಿಯ ವಿಶೇಷತೆಗಳನ್ನು ಸಾಹಿತ್ಯಾಸಕ್ತರು ವೀಕ್ಷಿಸಲಿದ್ದಾರೆ.ಇಂದು ನಡೆದ ಪ್ರವಾಸ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ನಾಳೆ (ನ. 26)ಕೂಡಾ ಬೆಳಿಗ್ಗೆ 10 ಗಂಟೆಗೆ ಈ ಪ್ರವಾಸ ನಡೆಯಲಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: