ಕರ್ನಾಟಕ

ಟಾಟಾ ಸುಮೋ ಡಿವೈಡರ್‍ಗೆ ಡಿಕ್ಕಿ

ಕೋಲಾರ,ನ.25: ಅಕ್ರಮವಾಗಿ ಪಡಿತರ ಅಕ್ಕಿ ತುಂಬಿಕೊಂಡು ಹೋಗುತ್ತಿದ್ದ ಟಾಟಾ ಸುಮೋ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಕೆಜಿಎಫ್ ಆಲದಮರದ ಬಳಿ ನಡೆದಿದೆ.

ತಮಿಳುನಾಡಿಗೆ ಸೇರಿದ ಪಡಿತರ ಅಕ್ಕಿಯನ್ನು ಹಲವು ಬಾರಿ ರೈಲಿನ ಮೂಖಾಂತರ ಕಳ್ಳಸಾಗಾಣಿಕೆ ಮಾಡಿ ಮಾರಾಟ ಮಾಡುತ್ತಿದ್ದರು. ಬಾರಿ ಟಾಟಾ ಸುಮೋದಲ್ಲಿ ಸುಮಾರು 30 ಮೂಟೆಯಷ್ಟು ಪಡಿತರ ಅಕ್ಕಿಯನ್ನು ತುಂಬಿಕೊಂಡು ತಮಿಳುನಾಡು ಕಡೆಯಿಂದ ಬಂಗಾರಪೇಟೆ ಕಡೆಗೆ ಬರಲಾಗುತ್ತಿದ್ದ ಸಂದರ್ಭದಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಟಾಟಾ ಸುಮೋ ಪಲ್ಟಿಯಾದ ಪರಿಣಾಮ ಒಳಗಡೆಯಿದ್ದ ಅಕ್ಕಿ ಮೂಟೆ ಒಡೆದು ಅಕ್ಕಿಯೆಲ್ಲಾ ರಸ್ತೆ ಪಾಲಾಗಿದೆ. ಪ್ರಕರಣ ಕೆಜಿಎಫ್ ಬೆಮಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ವರದಿ : ಪಿ.ಎಸ್ )

Leave a Reply

comments

Related Articles

error: