ಪ್ರಮುಖ ಸುದ್ದಿಮೈಸೂರು

ಕನ್ನಡ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿದ ಯಶಸ್ವಿ ಹಂತದಲ್ಲಿದೆ: ಮನು ಬಳಿಗಾರ್

ಮೈಸೂರು.ನ.25:- ಮೈಸೂರಿನಲ್ಲಿ ಶುಕ್ರವಾರದಿಂದ ಆರಂಭಗೊಂಡಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿದ ಜನಮನ್ನಣೆ ಪಡೆಯುತ್ತಾ ಯಶಸ್ವಿಯ ಹಂತವೇರುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್  ರಾಜ್ಯಾಧ್ಯಕ್ಷ ಡಾ.ಮನು ಬಳಿಗಾರ್  ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಧಾನ ವೇದಿಕೆ ಸಮೀಪವಿರುವ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎರಡು ಲಕ್ಷಕ್ಕೂ ಮೀರಿದ ಜನರು ಸಮ್ಮೇಳನವನ್ನು ಕಣ್ತುಂಬಿಕೊಂಡಿದ್ದಾರೆ. ಕನ್ನಡ ಮತ್ತು ಸಾಹಿತ್ಯ ಪ್ರೇಮಿಗಳ ಜನಪ್ರವಾಹವೇ ಹರಿದು ಬರುತ್ತಿದೆ. ಕನ್ನಡ ನಾಡಿನ ಹಲವಾರು ಸಾಹಿತಿಗಳು ಸಮ್ಮೇಳನವನ್ನು ಸಾಕ್ಷೀಕರಿಸುವುದರ ಮೂಲಕ ಕನ್ನಡ ನುಡಿ ಜಾತ್ರೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ 500 ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳಿದ್ದು, ಪ್ರತಿ ಮಳಿಗೆಯಲ್ಲೂ ಪುಸ್ತಕ ಪ್ರೇಮಿಗಳ ನೂಕುನುಗ್ಗಲು ಕಂಡುಬರುತ್ತಿದೆ. ಇದು ಕನ್ನಡ ಸಾಹಿತ್ಯಾಭಿಮಾನಿಗಳ ಪುಸ್ತಕ ಪ್ರೇಮಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯ ಪಟ್ಟರಲ್ಲದೆ, ಕನ್ನಡವನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟುವ ಸಮ್ಮೇಳನದ ಆಶಯ ಈಡೇರುವುದರಲ್ಲಿ ಯಾವುದೇ ಸಂಶಯ ನನಗಿಲ್ಲ ಎಂದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: