Uncategorizedಪ್ರಮುಖ ಸುದ್ದಿಮೈಸೂರು

ನವೆಂಬರ್ ಅಂತ್ಯದೊಳಗೆ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿಗೆ ಸೇರ್ಪಡೆ

ರಾಜ್ಯದ ದಲಿತ ಮುಖಂಡ, ಸಭ್ಯ ಹಿರಿಯ ರಾಜಕಾರಣಿ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿ ಪಕ್ಷಕ್ಕೇ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದ್ದು ದಿನಾಂಕ ನಿಗದಿಯಾಗಿಲ್ಲ ಎನ್ನುವುದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ಮೈಸೂರು ಭಾಗದ ಪ್ರಭಾವಿ ನಾಯಕ, ದಲಿತ ಮುಖಂಡ ಹಾಗೂ ಅನುಭವಿ ರಾಜಕಾರಣಿಯಾದ ಶ್ರೀನಿವಾಸ ಪ್ರಸಾದ್ ನಿರೀಕ್ಷೆಯಂತೆ ಕಮಲದ ತೆಕ್ಕೆಗೆ ನವೆಂಬರ್ ತಿಂಗಳ ಅಂತ್ಯದೊಳಗೆ ಸೇರಲಿದ್ದು ಮೈಸೂರಿನ ಭಾಗದಲ್ಲಿ ಬಿಜೆಪಿಗೆ ಬಲ ಬರಲಿದೆ ಎನ್ನುವುದು ಪಕ್ಷದ ನಿರೀಕ್ಷೆಯಾಗಿದೆ.

ಜಾತ್ಯಾತೀತ ಸಿದ್ಧಾಂತ ಹೊಂದಿರುವ ಶ್ರೀನಿವಾಸ ಪ್ರಸಾದ್ ಅವರನ್ನು ಸೆಳೆಯಲು ಜೆಡಿಎಸ್ ಪಕ್ಷದ ಮುಖಂಡರಾದ ಮಾಜಿ ಪ್ರಧಾನಿ ದೇವೇಗೌಡ, ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಷಕ್ಕೆ ಸೆಳೆಯಲು ಹರಸಾಹಸಪಟ್ಟಿದ್ದರು. ಬಲ್ಲ ಮೂಲಗಳ ಪ್ರಕಾರ ಬಿಜೆಪಿ ಸೇರ್ಪಡೆಯಾಗುವುದರಿಂದ ರಾಷ್ಟ್ರೀಯ ಪಕ್ಷದಲ್ಲಿ ಗುರುತಿಸಿಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸುವ ವಿಶ್ವಾಸವನ್ನು ಹೊಂದಿದ್ದಾರೆ. ಜಾತ್ಯಾತೀತ ನಿಲುವಿನ ಪಕ್ಷಗಳ ಕಡೆ ಒಲವು ತೋರಿದ್ದರು, ಕುಟುಂಬ ವರ್ಗ, ಬಂಧು, ಹಿತೈಷಿಗಳು, ಅಭಿಮಾನಿಗಳು ಬಿಜೆಪಿ ಸೇರಲು ಒತ್ತಡ ಹೇರಿದ್ದು. ಇದರಿಂದ ಬಿಜೆಪಿ ಕಡೆ ಮುಖ ಮಾಡಿರುವ ಪ್ರಸಾದ್ ಸದ್ಯದಲ್ಲಿಯೇ ಕಮಲವನ್ನು ಹಿಡಿಯಲಿದ್ದಾರೆ.

Leave a Reply

comments

Related Articles

error: