
ಪ್ರಮುಖ ಸುದ್ದಿಮೈಸೂರು
ಪತ್ರಿಕೆಯು ವೈಚಾರಿಕ ಬದ್ಧವಾಗಿರಬೇಕು: ಪ್ರೊ. ಚಂದ್ರಶೇಖರ್ ಪಾಟೀಲ
ಮೈಸೂರು.ನ.25 :- ವೈಚಾರಿಕ ಬದ್ಧತೆಯಿಂದ ನಿಗದಿತ ಸಮಯದಲ್ಲಿ ಪತ್ರಿಕೆ ಚಂದದಾರರಿಗೆ ತಲುಪಬೇಕು. ಪತ್ರಿಕೆಯು ಆರೋಗ್ಯ ಪೂರ್ಣವಾಗಿ, ಸಂವಿಧಾನ ಬದ್ಧವಾಗಿ ಅಕ್ಷರದ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಸರಿಪಡಿಸಬಹುದು ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪ್ರೊ. ಚಂದ್ರಶೇಖರ್ ಪಾಟೀಲ ಹೇಳಿದರು.
ಚಂದ್ರಕಾಂತ ವಡ್ಡು ಸಂಪಾದಕತ್ವದ ‘ಸಮಾಜಮುಖಿ’ ಮಾಸಪತ್ರಿಕೆ ಪ್ರಾಯೋಗಿಕ ಸಂಚಿಕೆಯನ್ನು ಸಾಹಿತ್ಯ ಸಮ್ಮೇಳನದ ಮಾಧ್ಯಮ ಕೇಂದ್ರದಲ್ಲಿ ಚಂದ್ರಶೇಖರ್ ಪಾಟೀಲ ಬಿಡುಗಡೆ ಮಾಡಿದರು. ಸಂಪಾದಕೀಯ ಸಲಹೆಗಾರರಾದ ಪೃಥ್ವಿದತ್ತ ಚಂದ್ರಶೋಭಿ, ಸಂಪಾದಕ ಚಂದ್ರಕಾಂತ ವಡ್ಡು ಮತ್ತು ಕಾರ್ಯಕಾರಿ ಸಂಪಾದಕ ಚಂದ್ರಶೇಖರ ಬೆಳೆಗೆರೆ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)