ಮೈಸೂರು

ತಂಡೋಪತಂಡವಾಗಿ ಹರಿದು ಬಂದ ಜನಸಾಗರ: ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿದ ಜಿಲ್ಲಾಡಳಿತ

ಮೈಸೂರು,ನ.25:- 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿದ್ದು, ಲಕ್ಷೋಪಲಕ್ಷ ಕನ್ನಡಿಗರು, ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಮೈಸೂರು ಜಿಲ್ಲಾಡಳಿತ ಸಮ್ಮೇಳನಕ್ಕೆ ಆಗಮಿಸುವ ಪ್ರತಿಯೊಬ್ಬರ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿದೆ.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮನ್ವಯದಲ್ಲಿ ಸಮ್ಮೇಳನ ನಡೆಯುತ್ತಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಮಂಟಪ, ರಾಷ್ಟ್ರಕವಿ ಕುವೆಂಪು ಪ್ರಧಾನ ವೇದಿಕೆಯ ಹಿಂಭಾಗ ತುರ್ತು ಆಸ್ಪತ್ರೆಯನ್ನು ತೆರೆಯಲಾಗಿದೆ. ಸಮ್ಮೇಳನ ನಡೆಯುವ ಮೂರು ದಿನಗಳು ಆಸ್ಪತ್ರೆ ಕಾರ್ಯನಿರ್ವಹಿಸಲಿದೆ. ಆರು ಹಾಸಿಗೆ, ಸುಸಜ್ಜಿತ ಪ್ರತ್ಯೇಕ ತಪಾಸಣೆ, ವೈದ್ಯಕೀಯ ಪರೀಕ್ಷೆಗೆಂದು ಕೊಠಡಿಗಳು ಇದ್ದು, ಮೂರು ಆಂಬುಲೆನ್ಸ್ ವಾಹನಗಳು ಸನ್ನದ್ಧ ಸ್ಥಿತಿಯಲ್ಲಿದೆ. ಆಸ್ಪತ್ರೆಯಲ್ಲಿ 25 ನುರಿತ ವೈದ್ಯರ ತಂಡ ಮೂರು ಪಾಳಿಗಳಲ್ಲಿ, 40 ಪ್ಯಾರಾ ಮೆಡಿಕಲ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲ ದಿನ ಸುಮಾರು 500 ಜನರು ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆಗಳಿಗೆ ಒಳಗಾದರು. ಶುಕ್ರವಾರ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದ ಒಬ್ಬರನ್ನು ಮಾತ್ರ ಕೆ.ಆರ್ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ವೈದ್ಯ ಡಾ. ಸೋಮಶೇಖರ್ ಮಾಹಿತಿ ನೀಡಿದರು.

ಡಾ. ರಘುಕುಮಾರ್ ಅವರು ಮಾತನಾಡಿ ಈ ಕೇಂದ್ರದಲ್ಲಿ, ಉಚಿತ ನೋಂದಣಿ, ಉಚಿತ ತಪಾಸಣೆ, ಉಚಿತ ಔಷಧ ವಿತರಣೆಯೂ ನಡೆಯುತ್ತಿದೆ. ನವೆಂಬರ್ 25 ಮಧ್ಯಾಹ್ನದ ವೇಳೆಗೆ 852 ಜನರು  ಭೇಟಿ ನೀಡಿದ್ದಾರೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: