ಮೈಸೂರು

ಗೌರಿಶಂಕರದಲ್ಲಿ ಚಿರತೆ ಪ್ರತ್ಯಕ್ಷ : ಸ್ಥಳೀಯರಲ್ಲಿ ಆತಂಕ

ಕಳೆದ ಒಂದು ವಾರಗಳಿಂದ ಚಾಮುಂಡಿಬೆಟ್ಟದ ತಪ್ಪಲಿನ ಗೌರಿಶಂಕರ ನಗರದ ಸುತ್ತಮುತ್ತ ಚಿರತೆಯೊಂದು ಪ್ರತ್ಯಕ್ಷವಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಶನಿವಾರ ಚಿರತೆ ಬಂಡೆಯೊಂದರ ಮೇಲೆ ಮಲಗಿಕೊಂಡಿದ್ದು ಸಾರ್ವಜನಿಕರಿಗೆ ಗೋಚರಿಸಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಗೌರಿಶಂಕರ ನಗರದಲ್ಲಿ ಕಾಣಿಸಿಕೊಂಡಿರುವ ಚಿರತೆ ಅಲ್ಲಿರುವ ದೊಡ್ಡ ಬಂಡೆಯೊಂದರ ಮೇಲೆ ಕಾಣಿಸಿಕೊಂಡಿದೆ. ರಾತ್ರಿ ಊರೊಳಗೆ ನುಗ್ಗಿ ನಾಯಿಯೊಂದನ್ನು ಅಟ್ಟಾಡಿಸಿಕೊಂಡು ಹೋಗಿದ್ದು, ದಾಂಧಲೆ ಎಬ್ಬಿಸಿದೆ ಎನ್ನಲಾಗಿದೆ. ಬಂಡೆಯ ಮೇಲೆ ಕುಳಿತಾಗ ಸ್ಥಳೀಯರು ಅದನ್ನು ಗಲಾಟೆ ಮಾಡಿ ಓಡಿಸಲು ಯತ್ನಿಸಿದರೂ ಅದು ಜಪ್ಪಯ್ಯ ಎನ್ನದೆ ಅವರನ್ನು ನೋಡಿ ಮತ್ತೆ ಸುಮ್ಮನೆ ಮಲಗಿಕೊಂಡಿದೆ ಎನ್ನಲಾಗಿದೆ. ಚಿರತೆಯ ದಾಂಧಲೆಯಿಂದ ಗೌರಿಶಂಕರ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಇತ್ತೀಚೆಗೆ ಕಾಡು ಬಿಟ್ಟು ನಾಡನ್ನು ಸೇರುತ್ತಿರುವ ಪ್ರಾಣಿಗಳಿಂದ ಜನತೆ ಕಂಗಾಲಾಗಿದ್ದಾರೆ.

Leave a Reply

comments

Related Articles

error: