ಕರ್ನಾಟಕ

ಟಿವಿ9 ವಿರುದ್ಧ ಸಚಿವ ತನ್ವೀರ್ ಸೇಠ್ ದೂರು

ಸಚಿವರು ಟಿಪ್ಪು ಜಯಂತಿ ವೇಳೆ ಮೊಬೈಲ್ನಲ್ಲಿ ಆಶ್ಲೀಲ ಚಿತ್ರ ವೀಕ್ಷಣೆ ಮಾಡಿದ ಬಗ್ಗೆ ಸುದ್ದಿಪ್ರಸಾರ ಮಾಡಿದ ಟಿವಿ9 ವಿರುದ್ಧ ಸಚಿವ ತನ್ವೀರ್ ಸೇಠ್ ದೂರು ದಾಖಲಿಸಿದ್ದಾರೆ.

ರಾಯಚೂರಿನಲ್ಲಿ ಟಿಪ್ಪು ಜಯಂತಿ ವೇಳೆ ಮೊಬೈಲ್ ನಲ್ಲಿ ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದ್ದ ಬಗ್ಗೆ  ಟಿವಿ9ನಲ್ಲಿ ವರದಿ ಮಾಡಲಾಗಿತ್ತು. ಸಚಿವರ ಕಾರ್ಯವೈಖರಿಗೆ  ವಿರೋಧ ಪಕ್ಷಗಳು, ಸಂಘ ಸಂಸ್ಥೆಗಳು ಧರಣಿ ಸತ್ಯಾಗ್ರಹ ನಡೆಸಿ ರಾಜೀನಾಮೆಗೆ ಆಗ್ರಹಿಸಲಾಯಿತು. ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾದವು.

ಈ ಹಿನ್ನೆಲೆಯಲ್ಲಿ,  ರಾಯಚೂರು ಜಿಲ್ಲಾ ವರದಿಗಾರ ಸಿದ್ದು ಬಿರಾದಾರ್ ಮತ್ತು ಛಾಯಾಗ್ರಾಹಕ ದನಂಜಯ್ ವಿರುದ್ಧ ರಾಯಚೂರು ಪಶ್ಚಿಮ ಠಾಣೆಯಲ್ಲಿ ಸಚಿವರು ಎಪಿಎಸ್ ಸೆಕ್ಷನ್ 504ರ ಅಡಿಯಲ್ಲಿ ದೂರು ದಾಖಲಿಸಿದ್ದು, ದೂರಿನಲ್ಲಿ ಸುದ್ದಿ ವಾಹಿನಿ ವ್ಯಕ್ತಿಗತ ಅಪಮಾನ ಮಾಡುವ ರೀತಿಯಲ್ಲಿ ಸುದ್ದಿ ಬಿತ್ತರಿಸಿದೆ ಎಂದು ಆರೋಪಿಸಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Leave a Reply

comments

Related Articles

error: