ದೇಶಪ್ರಮುಖ ಸುದ್ದಿ

ಗಂಗಾನದಿಯಲ್ಲಿ ತೇಲಿ ಬಂದ ಕಂತೆ ಕಂತೆ ನೋಟುಗಳ ತೆಪ್ಪ..!

ಸರ್ಕಾರಕ್ಕೆ ತೆರಿಗೆ ವಂಚಿಸಿ ಅನಧಿಕೃತವಾಗಿ  ಶೇಖರಿಸಿಟ್ಟುಕೊಂಡ ಹಣದ  ಲೆಕ್ಕ ನೀಡಲು ಪ್ರಸಕ್ತ ಸಮಯದಲ್ಲಿ ಸಾಧ್ಯವಿಲ್ಲವೆಂದು ಮನಗಂಡು ಕಾಳದಂಧೆಕೋರರು ಹಣವನ್ನು ಗಂಗಾನದಿಗೆ ಆರ್ಘ್ಯಾ ನೀಡಿದ್ದಾರೆ.

ಘಟನೆಯೂ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜರುಗಿದ್ದು ತೆಪ್ಪದಲ್ಲಿ 500 ಹಾಗೂ 1000 ರೂಪಾಯಿ ನೋಟಿನ ಕಂತೆಗಳನ್ನು ತುಂಬಿ ಗಂಗಾನದಿಯಲ್ಲಿ ತೇಲಿಬಿಟ್ಟಿರುವ ಬಗ್ಗೆ ವರದಿಯಾಗಿದೆ.  ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ತಲುಪಿಸಿದ್ದು ಘಟನಾ ಸ್ಥಳಕ್ಕೆ ಆಗಮಿಸದ ಪೊಲೀಸರು ತೆಪ್ಪವನ್ನು ವಶಕ್ಕೆ ಪಡೆದಿದ್ದಾರೆ.  ಕಪ್ಪು ಹಣ ಹಾಗೂ ಖೋಟಾ ನೋಟು ಹಾವಳಿ ತಡೆಯುವ ನಿಟ್ಟಿನಲ್ಲಿ 500 ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಗಂಭೀರ ಕ್ರಮ ಜರುಗಿಸಿರುವ ಕೇಂದ್ರ ಸರ್ಕಾರದ ಈ ಕ್ರಮವು ಅಕ್ರಮವಾಗಿ ಹಣ ದಾಸ್ತಾನು ಮಾಡಿದವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಮಂಗಳವಾರ ನ.8 ರಿಂದ ಕಾಳಧನಕೋರರು ಅನಧಿಕೃತವಾಗಿ ಶೇಖರಿಸಿರುವ ಹಣವನ್ನು ದೇವರ ಹುಂಡಿಗೆ, ಭೂಮಿಯಲ್ಲಿ ಗುಂಡಿ ಮಾಡಿ ಮಣ್ಣು ಮುಚ್ಚಿದ ಪ್ರಕರಣವು ನಡೆದ ನಿದರ್ಶನವಿದೆ.

Leave a Reply

comments

Related Articles

error: