ಮೈಸೂರು

ಮೂರನೇ ದಿನವೂ ಸಹ ಕಿಟ್ ವಿತರಣೆ

ಮೈಸೂರು, ನ.26:-ಸಮ್ಮೇಳನದ ಮೂರನೇ ದಿನವೂ ಸಹ ನೋಂದಾಯಿತ ಪ್ರತಿನಿಧಿಗಳಿಗೆ ಕಿಟ್ ವಿತರಣೆ ಮಾಡಲಾಯಿತು ಎಂದು ನೋಂದಣಿ ಸಮಿತಿ ಅಧ್ಯಕ್ಷ ಮೈಲಾಕ್ ಅಧ್ಯಕ್ಷ ಹೆಚ್. ಎ. ವೆಂಕಟೇಶ್  ತಿಳಿಸಿದ್ದಾರೆ.
ನೋಂದಣಿಯ ನಕಲಿ ಹಾವಳಿ ಬಹುತೇಕ ನಿಯಂತ್ರಣಕ್ಕೆ ಬಂದಿದ್ದರಿಂದ ಕಿಟ್ ವಿತರಣೆ ಕಾರ್ಯ ಕೊನೆ ದಿನ ಸರಾಗವಾಗಿ ನಡೆಯಿತು ಎಂದು ನೋಂದಣಿ ಸಮಿತಿ ಕಾರ್ಯದರ್ಶಿ ಎಸ್. ಜಿ. ಸೋಮಶೇಖರ್  ತಿಳಿಸಿದ್ದಾರೆ.  ನಕಲಿ ನೋಂದಣಿ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ಕೊನೆಯ ದಿನ ಕಡಿಮೆಯಾಗಿತ್ತು. ಮುಂದಿನ ಸಮ್ಮೇಳನಗಳಲ್ಲಿ ಬಾರ್ ಕೋಡ್ ರಶೀದಿ ಅಗತ್ಯ. ಇಲ್ಲದಿದ್ದರೆ, ಪ್ರತಿ ಸಮ್ಮೇಳನದಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೆಚ್. ಎ. ವೆಂಕಟೇಶ್ ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರು ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: