ಪ್ರಮುಖ ಸುದ್ದಿಮೈಸೂರು

ಸಮ್ಮೇಳನಗಳು ಮತ್ತು ಅದರ ನಿರ್ಣಯಗಳು ಸರ್ಕಾರಗಳನ್ನು ಎಚ್ಚರಿಸುವ ಕೆಲಸಮಾಡಬೇಕಿದೆ : ಪ್ರೊ.ಚಂದ್ರಶೇಖರ ಪಾಟೀಲ

ಮೈಸೂರು,ನ.27:–  83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರು ತಮ್ಮ ಸಮಾರೋಪ ನುಡಿಯಲ್ಲಿ ಕನ್ನಡ ಎಂಬ ಮಂತ್ರಶಕ್ತಿ ಎಲ್ಲರನ್ನು ಒಂದೇ ವೇದಿಕೆಯಲ್ಲಿ ಸೇರಿಸಿದೆ. ಸಾರ್ವಜನಿಕ ಭಾಷೆ ಹೃದಯದ ಭಾಷೆಯಾಗುವುದು ಸಾಹಿತ್ಯದಿಂದ. ಭಾಷೆ ಕಲಿಸಬೇಕಾದದ್ದು ರಚನೆಯೆ ಕಲೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಇಂದು ಜಗತ್ತಿನ ಗಮನ ಸೆಳೆಯುತ್ತಿದೆ, ಕನ್ನಡ ಮನಸ್ಸುಗಳು ಸದಭಿರುಚಿಯ ಪ್ರಗತಿಯ ಆಶಯದೊಡನೆ ನಾಡನ್ನು ಕಟ್ಟುವ ಕಾಯಕದಲ್ಲಿ ತೊಡಗಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಹೆಚ್.ಕೆ.ಪಾಟೀಲ್ ಮಾತನಾಡಿ ಮೈಸೂರಿನಲ್ಲಿ ನಡೆದ ಸಮ್ಮೇಳನ ಉತ್ತರ ಕರ್ನಾಟಕದ  ದಿಟ್ಟ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ ಸಾಮರಸ್ಯ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.  ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆದು, ಗೋಷ್ಠಿಗಳು ವಿಚಾರಗಳನ್ನು ಯಶಸ್ವಿಯಾಗಿ ಸಾಹಿತ್ಯಾಸಕ್ತರಿಗೆ ತಲುಪಿಸಿದೆ. ಸಮ್ಮೇಳನಗಳು ಮತ್ತು ಅದರ ನಿರ್ಣಯಗಳು ಸರ್ಕಾರಗಳನ್ನು ಎಚ್ಚರಿಸುವ ಕೆಲಸಮಾಡಬೇಕಿದೆ. ಈ ಕಾರ್ಯಕ್ಕೆ ನಿಕಟ ಪೂರ್ವ ಅಧ್ಯಕ್ಷರುಗಳು ಪರಿಷತ್ತಿಗೆ ಸಹಕರಿಸಬೇಕು ಎಂದು ತಿಳಿಸಿದರು.  ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಕೇಂದ್ರ ಸಚಿವ ಅನಂತಕುಮಾರ್, ಮೈಸೂರು –ಕೊಡಗು ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಸಕ್ಕರೆ ಸಚಿವೆ ಎಂ.ಸಿ. ಮೋಹನ್ ಕುಮಾರಿ ಮತ್ತು ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಪರಿಷತ್ತಿನ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: