ಮೈಸೂರು

ಚಿರತೆಗೆ ಕರು ಬಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿರತೆಯ ಹಾವಳಿ ಹೆಚ್ಚುತ್ತಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ. ನಗರದ ಪೊಲೀಸ್ ಭವನದ ಹಿಂಭಾಗದಲ್ಲಿ ಚಿರತೆಯೊಂದು ಕರು ಹಾಗೂ ಹಂದಿಯನ್ನು ತಿಂದು ಹಾಕಿರುವ ಘಟನೆ ನಡೆದಿದೆ.

ನಗರದ ಪೊಲೀಸ್ ಭವನ ಹಾಗೂ ಹಾರ್ಸ್ ರೈಡಿಂಗ್ ಸ್ಕೂಲ್ ಸಮೀಪ ಅಲ್ಲಿನ ನಿವಾಸಿ ಚಿದಾನಂದ ಎಂಬುವರಿಗೆ  ಸೇರಿದ ಕರುವೊಂದನ್ನು ತಿಂದು ಹಾಕಿದೆ. ಶನಿವಾರ ಹೊರಗೆ ಬಿಟ್ಟ ಕರು ಮನೆಗೆ ವಾಪಸ್ಸಾಗದ ಕಾರಣ ಭಾನುವಾರ ಬೆಳಿಗ್ಗೆ ಚಿದಾನಂದ ಕರುವನ್ನು ಹುಡುಕಿ ಹೊರಟಿದ್ದರು. ಪೊಲೀಸ್ ಭವನದ ಹಿಂಭಾಗ ಏನೋ ವಾಸನೆ ಬರುತ್ತಿದೆ ಎಂದು ಹೋಗಿ ನೋಡಲಾಗಿ ಕರು ಹಾಗೂ ಹಂದಿ ಅರ್ಧ ತಿಂದಿರುವ ರೀತಿಯಲ್ಲಿ ಬಿದ್ದಿತ್ತು ಎನ್ನಲಾಗಿದೆ.

ವಾರದ ಹಿಂದೆಯೂ ಇಲ್ಲಿ ಕುರಿಯೊಂದು ಕಾಣೆಯಾಗಿದ್ದು, ಚಿರತೆಯೇ ತಿಂದಿರಬೇಕೆಂದು ಹೇಳಲಾಗುತ್ತಿದೆ. ಇದೀಗ ಪದೇ ಪದೇ ಚಿರತೆ ಕಾಣಿಸಿಕೊಳ್ಳತೊಡಗಿದ್ದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ.

Leave a Reply

comments

Related Articles

error: