ಮೈಸೂರು

ಯುವ ಸಮೂಹ ಕನ್ನಡ ನಾಡು,ನುಡಿ ರಕ್ಷಣೆಗೆ ಮುಂದಾಗಬೇಕು : ಎಂ.ರಮೇಶ್

ಮೈಸೂರು, ನ:26- ಕನ್ನಡ ನಾಡಿನ ಜಾನಪದ ಕಲೆ, ಸಂಸ್ಕೃತಿ, ಹಾಗೂ ಕನ್ನಡ ಭಾಷೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ರೂಪಿಸುವ ಮುಖಾಂತರ ಯುವ ಸಮೂಹ ಕನ್ನಡ ನಾಡು,ನುಡಿ ರಕ್ಷಣೆಗೆ ಮುಂದಾಗಬೇಕೆಂದು ತಾಲೂಕು ಪಂಚಾಯತ್ ಸದಸ್ಯ ಎಂ.ರಮೇಶ್ ಸಲಹೆ ನೀಡಿದರು.

ತಿ.ನರಸೀಪುರ ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ನಾಗರಿಕ ಸೇವಾ ವೇದಿಕೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಪ್ರಸ್ತುತ ರಾಜ್ಯದಲ್ಲಿ ಅನ್ಯಭಾಷಿಕರ ಸಂಖ್ಯೆ ಹೆಚ್ಚಳವಾಗಿದ್ದು, ರಾಜ್ಯದ ಜನತೆ ಪರಭಾಷೆಯ ವ್ಯಾಮೋಹಕ್ಕೆ ಒಳಗಾಗುತ್ತಿರುವ ಪರಿಣಾಮ ಕನ್ನಡ ಭಾಷೆ ದಿನದಿಂದ ದಿನಕ್ಕೆ ನಶಿಸುತ್ತಿದೆ. ಈ ನಿಟ್ಟಿನಲ್ಲಿ ಕನ್ನಡಿಗರಾದ ನಾವು ನಮ್ಮ ಮಕ್ಕಳು ಹಾಗೂ ನೆರೆಹೊರೆಯ ಜನರಿಗೆ ಕನ್ನಡದಲ್ಲಿ ಶಿಕ್ಷಣ ಕೊಡಿಸಿ, ಕನ್ನಡದಲ್ಲೇ ಮಾತನಾಡುವ ಮ‌ೂಲಕ ಭಾಷೆಯ ಉಳಿವಿಗೆ ಸಹಕರಿಸಬೇಕೆಂದರು. ಕಾರ್ಯಕ್ರಮದಲ್ಲಿ ಮಾಜಿ ಬೈರಾಪುರ ಗ್ರಾ.ಪಂ ಸದಸ್ಯ ನಂಜುಂಡಸ್ವಾಮಿ, ಆಲಗೂಡು ಬಸವರಾಜು, ವಿಷಕಂಠ, ಕನ್ನಡ ಸೇನೆ ಪುಟ್ಟಸ್ವಾಮಿ, ಹೋಟೆಲ್ ರಾಜಣ್ಣ, ಬಜ್ಜಿನಿಂಗಪ್ಪ, ರಾಜಬುದ್ದಿ, ಛಾಯಾಗ್ರಾಹಕ ಮಂಜುನಾಥ್, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಕರೋಹಟ್ಟಿ ಗ್ರಾ.ಪಂ ಅಧ್ಯಕ್ಷ ಬಿ.ಎಂ.ಶಿವಕುಮಾರ್, ನಾಗರಾಜು(ತಾತಪ್ಪ), ಅಂಗಡಿ ಮಹೇಶ್, ಆಲಗೂಡು ಚಂದ್ರು, ಹಾಲಿನ ಸತ್ಯ, ನಾಗರಾಜು(ಚೀಕಾ), ತಿರುಮಕೂಡಲು ಜಯರಾಂ, ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: