ಮೈಸೂರು

ಖಾಸಗಿ ಪವರ್ ಕಂಪನಿಯ ಎಡವಟ್ಟಿನಿಂದ ಕಾವೇರಿ ನದಿ ಈಗ ಆಯಿಲ್ ಮಿಶ್ರಿತ.!

ಮೈಸೂರು,ನ.27-ಕಬಿನಿ ಡ್ಯಾಂ ಪಕ್ಕದಲ್ಲಿರುವ ಖಾಸಗಿ ಪವರ್ ಕಂಪನಿಯ ಎಡವಟ್ಟಿನಿಂದ ಕಾವೇರಿ ನದಿ ಆಯಿಲ್ ಮಿಶ್ರಿತವಾಗಿದೆ.

ನದಿ ನೀರಿಗೆ ಆಯಿಲ್ ನೀರು ಮಿಕ್ಸ್ ಆಗುತ್ತಿದೆ. ಸುಭಾಷ್ ಪವರ್ ಕಾರ್ಪೊರೇಷನ್‌ನಿಂದ ಆಯಿಲ್ ಜೊತೆ ನೀರು ನದಿಗೆ ಬಿಡಲಾಗುತ್ತಿದೆ. ಕಂಪನಿಯು ಆಯಿಲ್ ಪ್ರತ್ಯೇಕಿಸಿ ನೀರು ಬಿಡಬೇಕು. ಆದರೆ ಆಯಿಲ್ ಜತೆಗೆ ನೀರು ನದಿಗೆ ಬಿಡಲಾಗುತ್ತಿದೆ.

ಜನ, ಜಾನುವಾರು ಕುಡಿಯಲು, ಲಕ್ಷಾಂತರ ಎಕ್ಟೇರ್ ನಷ್ಟು ಬೆಳೆಗೆ  ಕಬಿನಿ ನೀರು ಬಳಕೆಯಾಗುತ್ತದೆ. ನದಿಗೆ ಆಯಿಲ್ ನೀರು ಮಿಕ್ಸ್ ಆಗಿದ್ದರೂ ಡ್ಯಾಂನ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: