ಮೈಸೂರು

ಆನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ : ಜನಜಂಗುಳಿ ಅಡ್ಡಿ

ಮೈಸೂರು,ನ.27-ಆಹಾರ ಅರಸಿ ನಾಡಿಗೆ ಬಂದು ಹುಣಸೂರು ತಾಲೂಕು ಹನಗೋಡು ಹೋಬಳಿಯ ಬಿಲ್ಲೇನಹೊಸಹಳ್ಳಿಯಲ್ಲಿ ಬೀಡು ಬಿಟ್ಟಿರುವ ಆನೆಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಭಾನುವಾರ ಮೂರು ಆನೆಗಳು ಅರಣ್ಯದಂಚಿನ ಗ್ರಾಮದಲ್ಲಿ ಕಾಣಿಸಿಕೊಂಡಿದ್ದವು. ಎರಡು ಆನೆಗಳು ಕಾಡಿಗೆ ತೆರಳಿದ್ದು, ಒಂದು ಆನೆ  ಬಿಲ್ಲೇನಹೊಸಹಳ್ಳಿ ಬೀಡು ಬಿಟ್ಟಿದೆ.

ಈ ಆನೆಯನ್ನು ಕಾಡಿಗಟ್ಟಲು ಲಕ್ಷ್ಮಣ ತೀರ್ಥ ನದಿ ದಂಡೆಯಲ್ಲಿ ಸೋಮವಾರ ಮುಂಜಾನೆಯಿಂದ ಕಾರ್ಯಾಚರಣೆ ಪ್ರಾರಂಭವಾಗಿದ್ದು, ಸಾಕಾನೆಗಳಾದ ಅಭಿಮನ್ಯು, ಶ್ರೀನಿವಾಸ ನನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಗೆ ಜನಜಂಗುಳಿಯ ಅಡ್ಡಿಯಾಗುತ್ತಿದೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: