ಕರ್ನಾಟಕಪ್ರಮುಖ ಸುದ್ದಿ

ಮಾಸ್ತಿಗುಡಿ ದುರಂತ : ತಪ್ಪಿತಸ್ಥರಿಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರಿನ ತಿಪ್ಪಗೊಂಡನಹಳ್ಳಿಯ ಕೆರೆಯಲ್ಲಿ ಮಾಸ್ತಿಗುಡಿ’ ಸಾಹಸದೃಶ್ಯಗಳ ಚಿತ್ರೀಕರಣದ ವೇಳೆ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ ಚಿತ್ರ ನಿರ್ದೇಶಕ ಹಾಗೂ ಸಾಹಸ ನಿರ್ದೇಶಕ ಹಾಗೂ ಇತರೆ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

201603091710011237_nagshekhar-taken-the-new-song-for-the-mastigudi_secvpf-gifravivermaಚಿತ್ರೀಕರಣದ ವೇಳೆ ಸಾಹಸ ಕಲಾವಿದರಾದ ಅನಿಲ್ ಹಾಗೂ ಉದಯ್ ದುರ್ಮರಣಕ್ಕೀಡಾಗಿದ್ದರು, ಘಟನೆ ನಂತರ ತಲೆಮರೆಸಿಕೊಂಡಿದ್ದ ಚಿತ್ರತಂಡದ ಪ್ರಮುಖರು ಶನಿವಾರ ಮಾಗಡಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಪೊಲೀಸರು ಇವರುಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ನಂತರ ಮಾಗಡಿ 2ನೇ ಜೆಎಂಎಫ್‍ಸಿ ಕೋರ್ಟ್‍ಗೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶೆ ರೇಖಾ ಮೂವರು ಪ್ರಮುಖ ಆರೋಪಿಗಳಾದ ಚಿತ್ರ ನಿರ್ಮಾಪಕ ಸುಂದರ್ ಪಿ.ಗೌಡ, ನಿರ್ದೇಶಕ ನಾಗಶೇಖರ್, ಮತ್ತು ಸಾಹಸ ನಿರ್ದೇಶಕ ರವಿವರ್ಮಾ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟ ದುನಿಯಾ ವಿಜಯ್  ಚಿತ್ರತಂಡದ ಪ್ರಮುಖರಿಗೆ ಸಾಥ್ ನೀಡಿದ್ದರು.

ತಾತ್ಕಾಲಿಕ ನಿಷೇಧ : ಚಿತ್ರೀಕರಣದ ವೇಳೆ ಬೇಜವಾಬ್ದಾರಿ ಮೆರೆದ ಚಿತ್ರನಿರ್ದೇಶಕ ನಾಗಶೇಖರ್, ನಟ ದುನಿಯಾ ವಿಜಯ್ ಹಾಗೂ ಸಾಹಸ ನಿರ್ದೇಶಕ ರವಿಮರ್ಮಾಗೆ ಕನ್ನಡ ಚಲನಚಿತ್ರದಿಂದ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಬೇರೆ ಭಾಷೆಯಲ್ಲಿಯೂ ಚಿತ್ರ ಚಟುವಟಿಕೆ ನಡೆಸದಂತೆ ಆದೇಶವನ್ನು ಅಧ್ಯಕ್ಷ ಸಾರಾ ಗೋವಿಂದ ನೀಡಿದ್ದಾರೆ.

Leave a Reply

comments

Related Articles

error: