ಮೈಸೂರು

ಮಕ್ಕಳ ಮಾರಾಟ ಜಾಲ ಪ್ರಕರಣ: ಮತ್ತೆ ಐವರು ಮಕ್ಕಳ ರಕ್ಷಣೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಕ್ಕಳ ಮಾರಾಟ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಹಿಂದೆ ಎಂಟು ಮಕ್ಕಳನ್ನು ರಕ್ಷಿಸಿದ್ದು, ಇದೀಗ ಶನಿವಾರ ಮತ್ತೆ ಐವರು ಮಕ್ಕಳನ್ನು ರಕ್ಷಿಸಿದ್ದಾರೆ.

ಈ ಹಿಂದೆ ಬಂಧಿತ ಆರೋಪಿಗಳು  ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದರು. ಇದೀಗ  ಮೈಸೂರಿನಲ್ಲಿ ಎರಡು, ಕೇರಳದ ಪಾಲಕ್ಕಾಡ್ ನಲ್ಲಿ ಒಂದು, ಶಿವಮೊಗ್ಗಾದಲ್ಲಿ ಒಂದು, ಮಂಗಳೂರಿನಲ್ಲಿ ಒಂದು ಮಗು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಕೇರಳದಲ್ಲಿಯೇ ಇನ್ನೂ ಐವರು ಮಕ್ಕಳು ಇರುವ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಮಗು ಮಾರಾಟದಲ್ಲಿ ಹೆಣ್ಣುಮಕ್ಕಳಿಗೆ ಅದರಲ್ಲೂ ಒಂದರಿಂದ ಮೂರು ವರ್ಷದೊಳಗಿನ ಮಕ್ಕಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗಿದೆ. ನಲವತ್ತೈದು ಸಾವಿರದಿಂದ ಲಕ್ಷರೂಪಾಯಿಗಳವರೆಗೆ ಮಗುವನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

Leave a Reply

comments

Related Articles

error: