ದೇಶ

ಈ ಮಹಿಳೆ ಪ್ರಾಣಿಗಳ ಸೇವೆಗೆ ಏನು ಮಾಡ್ತಾಳೆ ಅನ್ನೋದನ್ನು ಕೇಳಿದ್ರೆ ದಂಗಾಗ್ತೀರಿ..!

ದೇಶ(ನವದೆಹಲಿ)ನ.27:- ಹಸಿದವರಿಗೆ ಅನ್ನ ನೀಡೋದೇ ಕಷ್ಟ. ಹೋಗಯ್ಯ ಮುಂದೆ ಅನ್ನೋ ಕಾಲ. ಆದರೆ ಇಲ್ಲೋರ್ವಳು ಮಹಿಳೆ ಇದ್ದಾಳೆ ಅವಳು ಏನು ಮಾಡ್ತಾಳೆ ಅಂತ ಕೇಳಿದ್ರೆ ದಂಗಾಗುತ್ತೀರಿ.

ಶೆಫ್ ವಿಕಾಸ್ ಖನ್ನಾ ಸಾಮಾಜಿಕ ಜಾಲತಾಣದಲ್ಲಿ ಫೊಟೋವೊಂದನ್ನು ಅಪ್ ಲೋಡ್ ಮಾಡಿದ್ದು, ವೈರಲ್ ಆಗಿದೆ. ಬಿಷ್ನೋಯಿ ಸಮಾಜಕ್ಕೆ ಸೇರಿದ ಮಹಿಳೆಯೋರ್ವರು ಜಿಂಕೆಯ ಮರಿಗೆ ಸ್ತನ್ಯಪಾನ ಮಾಡಿಸುತ್ತಿರುವ ಫೋಟೋವೊಂದನ್ನು ಇನ್ಸ್ಟಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದು ಇದೀಗ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಅವರು ತಿಳಿಸಿದ್ದೇನೆಂದರೆ ಈ ಮಹಿಳೆಯು ಹಲವು ಜಿಂಕೆಯ ಮರಿಗಳನ್ನು ಸಾವಿನ ದವಡೆಯಿಂದ ತಪ್ಪಿಸಿದ್ದಾರಂತೆ. ಈ ಸಮಾಜದ ಮಹಿಳೆಯರು ಪ್ರಾಣಿಗಳ ಮರಿಗಳನ್ನು ಪಾಲನೆ ಮಾಡುವುದರೊಂದಿಗೆ ತಮ್ಮ ಮಕ್ಕಳಂತೆ ಅದನ್ನು ಪೋಷಿಸುತ್ತಾರಂತೆ. ಮಹಿಳೆಯರಷ್ಟೇ ಅಲ್ಲದೇ ಪುರುಷರೂ ಕೂಡ ಅನಾಥ ಜಿಂಕೆ ಮರಿಗಳನ್ನು ತಂದು ಪಾಲನೆ ಪೋಷಣೆ ಮಾಡುತ್ತಾರಂತೆ.

ವಿಕಾಸ್ ಅವರು ಫೋಟೋ ಅಪ್ ಲೋಡ್ ಮಾಡಿ ಮಾನವೀಯತೆಯ ದೊಡ್ಡ ರೂಪ ದಯೆ. ಅನೇಕ ಅನಾಥ, ಗಾಯಗೊಂಡ ಜಿಂಕೆಗಳನ್ನು ಹಾಲುಣಿಸಿ ಬೆಳೆಸಿದ್ದೇನೆ ಎಂದು ಅವರಿಗೆ ಮಹಿಳೆ ತಿಳಿಸಿದ್ದಾಳಂತೆ. ರಾಜಸ್ಥಾನ್ ದ ಜೋಧ್ ಪುರ್ ಬಳಿ ಫೋಟೋ ತೆಗೆದಿದ್ದು, ಈ ಫೋಟೋವನ್ನು ಸುಮಾರು 28ಸಾವಿರ ಮಂದಿ ಲೈಕ್ ಮಾಡಿದ್ದಾರಂತೆ.  ಸಮಾಜದ ಮಹಿಳೆಯರು ಭಗವಾನ್ ವಿಷ್ಣುವಿನ ಭಕ್ತರಾಗಿದ್ದು, ಪ್ರಕೃತಿಯನ್ನು ಪೂಜಿಸುತ್ತಾರಂತೆ. ಹೆಚ್ಚಿನ ಮಂದಿ ಕಾಡು ಮತ್ತು ಮರುಭೂಮಿಯಲ್ಲಿ ವಾಸಿಸುತ್ತಾರಂತೆ.  (ಎಸ್.ಎಚ್)

Leave a Reply

comments

Related Articles

error: