ದೇಶ

ಮುಖ್ಯಮಂತ್ರಿ ಜಯಲಲಿತಾ ಸಂಪೂರ್ಣ ಚೇತರಿಕೆ : ಬಿಡುಗಡೆಗೆ ದಿನ ನಿಗದಿಯಾಗಿಲ್ಲ

ತೀವ್ರ ಅನಾರೋಗ್ಯದಿಂದ ಚೆನ್ಹೈನ ಅಪೋಲೋ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಈಗ ಸಂಪೂರ್ಣ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಕಾಲ ಸನ್ನಿಹಿತವಾಗಿದೆ ಎನ್ನುವ ಸಿಹಿ ಸುದ್ದಿ ತಮಿಳನಾಡಿಗರಿಗೆ ಆಸ್ಪತ್ರೆಯ ಅಧ್ಯಕ್ಷ ಡಾ.ಪ್ರತಾಪ್ ಸಿ.ರೆಡ್ಡಿ ನೀಡಿದ್ದಾರೆ.

ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯಕ್ಕೆ ಮಾರಕವಾಗಿದ್ದ ಸೋಂಕುಗಳು ಸಂಪೂರ್ಣ ನಿಯಂತ್ರಣದಲ್ಲಿದ್ದು ಇನ್ನಷ್ಟು ಚೇತರಿಸಿಕೊಳ್ಳುವ ಹಾಗೂ ವಿಶ್ರಾಂತಿಯ ಅಗತ್ಯತೆ ಇದೆ ಇದನ್ನು ಪರಿಗಣಿಸಿ ಅವರ ಡಿಸ್ಚಾರ್ಜ್ ದಿನಾಂಕವನ್ನು ನಿಗದಿಗೊಳಿಸಲಾಗುವುದು ಎಂದು ತಿಳಿಸಿದರು.

ಸೆ.22 ರಿಂದ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆದ ಮುಖ್ಯಮಂತ್ರಿ ಜಯಲಲಿತಾ ತೀವ್ರ ಜ್ವರ, ನಿರ್ಜಲೀಕರಣ, ಶ್ವಾಸಕೋಶದ ಸೋಂಕು ಸೇರಿದಂತೆ ನಿಯಂತ್ರಣಕ್ಕೆ ಬಾರದ ಮಧುಮೇಹ, ಹಲವಾರು ಅಂಗಗಳ ವೈಫಲ್ಯವೂ ಅನಾರೋಗ್ಯಕ್ಕೆ ಕಾರಣವಾಗಿತ್ತು, ಜಯಲಲಿತ ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಲು ಆಸ್ಪತ್ರೆಯೂ ನಿರ್ಧರಿಸಿತ್ತಾದರೂ ಅಂತಿಮ ಸಮಯದಲ್ಲಿ ನಿರ್ಧಾರವನ್ನು ಬದಲಿಸಿ ಇಂಗ್ಲೇಡಿನ ತಜ್ಞ ವೈದ್ಯರನ್ನೇ ರವಾನಿಸಿ ಚಿಕಿತ್ಸೆ ನೀಡಿದ್ದರು.

Leave a Reply

comments

Related Articles

error: