ಮನರಂಜನೆ

‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ನಂತರ ‘ಪ್ಯಾಡ್ ಮನ್’ ಆಗಿದ್ದಾರೆ ಅಕ್ಷಯ್ ಕುಮಾರ್..!

ದೇಶ(ಮುಂಬೈ)ನ.27;- ಬಾಲಿವುಡ್ ನ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಹಿಟ್ ಚಿತ್ರವನ್ನು ನೀಡಿದ ನಂತರ ‘ಪ್ಯಾಡ್ ಮನ್’ ಆಗ ಹೊರಟಿದ್ದು, ಹೊಸ ಪೋಸ್ಟರ್ ಬಿಡುಗಡೆಗೊಂಡಿದೆ.

ಈ ಪೋಸ್ಟರ್ ನಲ್ಲಿ ಅಕ್ಷಯ್ ಕುಮಾರ್ ಕಾಟನ್ ರಾಶಿಯ ಮೇಲೆ ನಿಂತಿದ್ದಾರೆ.  ಈ ಚಿತ್ರ ಅರುಣಾಚಲಮ್ ಮುರುಗನಂಥಮ್ ಎಂಬ ಹೆಸರಿನ ವ್ಯಕ್ತಿಯ ಜೀವನಾಧಾರಿತ ಚಿತ್ರವಾಗಿದ್ದು, ಈತ ಮಹಿಳೆಯರಿಗಾಗಿ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ನ್ಯಾಪಕಿನ್ ತಯಾರಿಸಿ, ಒಂದು ಕ್ರಾಂತಿಕಾರಿ ಹೆಜ್ಜೆಯಿಟ್ಟಿದ್ದರು.  ಬಾಲ್ಕಿ . ಚಿತ್ರವನ್ನು ನಿರ್ದೇಶಿಸಿದ್ದು, ಇದು ಟ್ವಿಂಕಲ್ ಖನ್ನಾ ಪ್ರೊಡಕ್ಷನ್ ಹೌಸ್ ನ ಮೊದಲ ಚಿತ್ರವಾಗಿದೆ. ಫನಿಬೋನ್ಸ್ ನಂತರ ಟ್ವಿಂಕಲ್ ಖನ್ನಾ 10 ಕಾದಂಬರಿ ಬರೆದಿದ್ದರು.ತಮ್ಮ ಕಾಲಂಗಾಗಿ ಸಂಶೋಧನೆ ನಡೆಸುತ್ತಿರುವಾಗ ಅರುಣಾಚಲಮ್ ಕುರಿತು ತಿಳಿದು ಬಂತು. ತಮ್ಮ ಕಾದಂಬರಿಯನ್ನು ಬಿಟ್ಟು ಸ್ಯಾನಿಟರಿ ಮನ್ ಕುರಿತು ಕಥೆ ಆರಂಭಿಸಿದರು. ಈ ಕುರಿತು ಟ್ವಿಂಕಲ್ ಖನ್ನಾ ಕಿರು ಚಿತ್ರ ಮಾಡಲು ಇಚ್ಛಿಸಿದ್ದರು. ಆದರೆ ಅಕ್ಷಯ್ ಕುಮಾರ್ ಮತ್ತು ಬಾಲ್ಕಿ ಇದನ್ನು ಹಿರಿಯ ತೆರೆಯಲ್ಲಿಯೇ ಮಾಡಲು ನಿರ್ಧರಿಸಿದರು. ಚಿತ್ರ 2018ರ ಜನವರಿ 26ರಂದು ತೆರೆ ಕಾಣಲಿದೆ. ಶೌಚಾಲಯ ಸಮಸ್ಯೆ ಕುರಿತು ಕಣ್ತೆರೆಸಿದ ಅಕ್ಷಯ್ ಈ ಬಾರಿ ಪ್ಯಾಡ್ ಮನ್ ಆಗಿ ಬರಲಿದ್ದಾರೆ. ಮಹಿಳೆಯರ ಅವಶ್ಯಕತೆಗಳಲ್ಲಿ ಒಂದಾದ  ಸ್ಯಾನಿಟರಿ ಕುರಿತ ಚಿತ್ರವನ್ನು ಗೆಲ್ಲಿಸುವಲ್ಲಿ ಮಹಿಳೆಯರು ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. (ಎಸ್.ಎಚ್)

Leave a Reply

comments

Related Articles

error: