ಸುದ್ದಿ ಸಂಕ್ಷಿಪ್ತ

ಅಕ್ಕನ ವೈಚಾರಿಕತೆ ಸಿದ್ಧಾಂತ ಇಂದಿಗೂ ಪ್ರಸ್ತುತ : ಪ್ರೊ.ಬಿ.ಟಿ.ಶಶಿಕಲಾದೇವಿ

ಮೈಸೂರು,ನ.27 : ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಶಿವಾನುಭವ ದಾಸೋಹದಲ್ಲಿ ಅಕ್ಕನ ವಚನಗಳಲ್ಲಿ ವೈಚಾರಿಕತೆ ವಿಯಷವಾಗಿ ಪ್ರೊ.ಬಿ.ಟಿ.ಶಶಿಕಲಾದೇವಿ ಮಾತನಾಡಿ ಹನ್ನೆರಡನೆಯ ಶತಮಾನದಲ್ಲಿ ಶರಣ ಸಾಹಿತ್ಯ ಉದಯವಾಯಿತು, ಧಾರ್ಮಿಕ ಸಾಮಾಜಿಕ, ಸಾಹಿತ್ಯಿಕವಾಗಿ ಕೊಡುಗೆಯನ್ನು ಕೊಟ್ಟ ಶರಣರ ಪರಂಪರೆಯಲ್ಲಿ ಅಕ್ಕಮಹಾದೇವಿ ಬೆಳಕಾಗಿ ಬಂದವರು ಎಂದು ತಿಳಿಸಿದರು.

ವಚನಗಲ ಮೂಲಕ ತಮ್ಮ ಜೀವನ ಚಿತ್ರಣವನ್ನೇ ತೆರೆದಿಟ್ಟಿದ್ದಳು, ತನ್ನೆಲ್ಲ ಸಾಧನೆಗಳನ್ನು ಅನುಭವ ಮಂಟಪದ ಶರಣರಿಗೆಲ್ಲ ಅರ್ಪಿಸಿದ್ದಳು, ಅಲ್ಲಮ ಪ್ರಭುವಿನ ಮಾರ್ಗದರ್ಶನದಂತೆ ಶ್ರೀಶೈಲದ ಕದಳಿ ವನಕ್ಕೆ ಹೋಗಿ ಚನ್ನಮಲ್ಲಿಕಾರ್ಜನನಲ್ಲಿ ಐಕ್ಯಳಾದಳು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀಶಿವರಾತ್ರಿ ರಾಜೇಂದ್ರ ಕಲಾತಂಡದವರ ಭಜನೆ ನಡೆಸಿಕೊಟ್ಟರು. (ಕೆ.ಎಂ.ಆರ್)

Leave a Reply

comments

Related Articles

error: