ಮೈಸೂರು

ರೋಟರಿ ಮತ್ತು ಅಪೋಲೊದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೈಲಕುಪ್ಪೆ: ಟಿಬೆಟನ್ ರೋಟರಿ ಲಾಸಾ ಹಾಗೂ ಮೈಸೂರಿನ ಅಪೋಲೊ ಆಸ್ಪತ್ರೆ ಸಹಯೋಗದಲ್ಲಿ ಬೈಲಕುಪ್ಪೆಯ ಟಿಬೆಟನ್ ಆರೆಂಜ್ ಡಯಾಗ್ನಸ್ಟಿಕ್ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಅಧ್ಯಕ್ಷ ಲಾಕ್ಪಸಿರಿಂಗ್ ಮಾತನಾಡಿ, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ತೋರಬೇಕೆಂದು ಸಲಹೆ ನೀಡಿದರು. ಆರು ತಿಂಗಳಿಗೊಮ್ಮೆ ತಪ್ಪದೆ ತಮ್ಮ ಆರೋಗ್ಯ ಪರಿಕ್ಷಿಸಿಕೊಂಡಲ್ಲಿ ಅಪಾಯಕಾರಿ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ಸ್ತ್ರೀರೋಗ ತಜ್ಞರಾದ  ಡಾ. ಸೌಜನ್ಯ ಅವರು ಮಾತನಾಡಿ, ಮಹಿಳೆಯರ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರದ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಅಪೋಲೊ ಆಸ್ಪತ್ರೆಯ ಡಾ. ದೇವರಾಜ್, ಡಾ.ಆನಂದ್, ಡಾ. ಸೌಜನ್ಯ, ಸಿಬ್ಬಂದಿ ಸೇರಿದಂತೆ ರೋಗಿಗಳನ್ನು ಪರಿಶೀಲಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಸುಮಾರು 85ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಬೈಲಕುಪ್ಪೆ ಲಾಸಾ ರೋಟರಿ ಸದಸ್ಯರು ಸ್ಥಳದಲ್ಲಿ ಹಾಜರಿದ್ದು, ಸೂಕ್ತ ವ್ಯವಸ್ಥೆ ಒದಗಿಸಿದರು.

web-22

Leave a Reply

comments

Related Articles

error: