ಮೈಸೂರು

ಲೈಂಗಿಕತೆಗೆ ಸಂಬಂಧಿಸಿ ಅಧ್ಯಯನಗಳು ನಡೆಯಬೇಕಿದೆ : ಡಿ.ರಂದೀಪ್

ದೇಶದಲ್ಲಿ ಯುವಪೀಳಿಗೆ ಮತ್ತು ಲೈಂಗಿಕತೆಗೆ ಸಂಬಂಧಿಸಿದಂತೆ ಬಹಳಷ್ಟು ಸಂಗತಿಗಳ ಅಧ್ಯಯನ ನಡೆಯಬೇಕಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದರು.

ಮೈಸೂರಿನ ಜೆ.ಎಸ್.ಎಸ್.ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಸೌತ್ ಏಷಿಯನ್ ಸೊಸೈಟಿ ಫಾರ್ ಸೆಕ್ಷುವಲ್ ಮೆಡಿಸಿನ್ ವತಿಯಿಂದ ನಡೆದ ಮನಸ್ಸು, ಪ್ರೀತಿ ಹಾಗೂ ಲೈಂಗಿಕತೆ ಕುರಿತ ವಿಚಾರ ಸಂಕಿರಣದಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿದರು. ದೇಶದಲ್ಲಿ ಲೈಂಗಿಕತೆಯು ಇಂದಿಗೂ ಮಡಿವಂತಿಕೆಯ ವಿಚಾರವಾಗಿಯೇ ಉಳಿದುಕೊಂಡಿದೆ. ಈ ವಿಚಾರಗಳನ್ನು ಮಾತನಾಡಲು ಮುಜುಗರ ಪಡುತ್ತೇವೆ ಎಂದರು.

ದೇಶದಲ್ಲಿ 35ಕ್ಕಿಂತ ಕಡಿಮೆ ವಯೋಮಾನದವರ ಸಂಖ್ಯೆ ಅಧಿಕವಾಗಿದೆ. ಅತ್ಯಾಚಾರ, ಮಕ್ಕಳ ಮೇಲೆ ದೌರ್ಜನ್ಯ, ಕೌಟುಂಬಿಕ ಕಲಹ ಪ್ರಕರಣಗಳು ಹೆಚ್ಚುತ್ತಿವೆ. ಲೈಂಗಿಕ ಅತೃಪ್ತಿ, ಔಷಧ ಬಳಕೆ, ಸಂತಾನೋತ್ಪತ್ತಿ ಸಮಸ್ಯೆ ಇಂದು ಸವಾಲಾಗಿ ಪರಿಣಮಿಸಿದೆ ಇವೆಲ್ಲವೂ ಸಂಕೀರ್ಣ ವಿಷಯಗಳಾಗಿದ್ದು ಈ ಕುರಿತು ವಿಚಾರ ಸಂಕಿರಣಗಳು ನಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ಮನೋರೋಗ ತಜ್ಞರ ಸಂಘದ ಅಧ್ಯಕ್ಷ  ಡಾ.ಜಿ.ಪ್ರಸಾದ್ ರಾವ್, ನಿಮ್ಹಾನ್ಸ್ ನಿರ್ದೇಶಕ ಬಿ.ಎನ್.ಗಂಗಾಧರ, ಸೌತ್ ಏಷಿಯನ್ ಸೊಸೈಟಿ ಫಾರ್ ಸೆಕ್ಷುವಲ್ ಮೆಡಿಸಿನ್ ಅಧ್ಯಕ್ಷ ಎಕೆಎಂ ಅನ್ವರ್ ಉಲ್ ಇಸ್ಲಾಂ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: