ಸುದ್ದಿ ಸಂಕ್ಷಿಪ್ತ

ನವೆಂಬರ್ 28 : ಜಾಥಾ ಕಾರ್ಯಕ್ರಮ

ಮೈಸೂರು.ನ.27:- ಮೈಸೂರು ನಗರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ 2015-16 ಮತ್ತು 2016-17ನೇ ಸಾಲಿನಲ್ಲಿ ಭಾರತ ದೇಶದ ಪ್ರಥಮ ಸ್ವಚ್ಛ ನಗರ ಮತ್ತು 2017-18ನೇ ಸಾಲಿನ ಭಾರತದ ಐದನೇ ಸ್ವಚ್ಛ ನಗರ ಎಂಬ ಗರಿಮೆಯನ್ನು ಪಡೆದುಕೊಂಡಿದೆ. 2018-19ನೆ ಸಾಲಿನ  ಮೈಸೂರು ನಗರವನ್ನು ಭಾರತ ದೇಶದ ಪ್ರಥಮ ಸ್ಚಚ್ಛನಗರ ಎಂಬ ಗರಿಮೆಯನ್ನು ಪಡೆಯುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಪ್ರಸ್ತುತ 2017-18ನೇ ಸಾಲಿನಲ್ಲಿ ಮೈಸೂರು ನಗರದ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ಸ್ವಚ್ಛತೆಯ ಸಂದೇಶವನ್ನು ಸಾರುವ ಸಲುವಾಗಿ ಮೈಸೂರಿನವರಾದ “ಮೈಸೂರು ಎಕ್ಸಪ್ರೆಸ್” ಎಂದೆ ಖ್ಯಾತಿ ಪಡೆದ, ಭಾರತದ ಅಂತಾರಾಷ್ಟ್ರೀಯ ವೇಗದ ಬೌಲರ್ ಹಾಗೂ ಹಾಲಿ ಅಂತಾರಾಷ್ಟ್ರೀಯ ಮ್ಯಾಚ್‍ರೆಫ್ರಿ ಆದ  ಜಾವಗಲ್ ಶ್ರೀನಾಥ್ ರವರನ್ನು ಮೈಸೂರು ನಗರದ ಸ್ವಚ್ಛತಾ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಶ್ರೀ ಜಾವಗಲ್ ಶ್ರೀನಾಥ್‍ರವರ ನೇತೃತ್ವದಲ್ಲಿ ಮನೆ ಮನೆ ತ್ಯಾಜ್ಯ ವಿಂಗಡಣೆಯ ಕುರಿತು ಅರಿವಿನ ಜಾಥಾ ಕಾರ್ಯಕ್ರಮವನ್ನು ನ.28ರಂದು  ಬೆಳಿಗ್ಗೆ 7-45 ಗಂಟೆಗೆ ವಲಯ ಕಛೇರಿ-5 ರ ವ್ಯಾಪ್ತಿಯಲ್ಲಿ ಬರುವ ಬಸವನಗುಡಿ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದು,    ಸ್ವಚ್ಛತಾ ರಾಯಭಾರಿಗಳಾದ  ಖುಷಿ., ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಆತ್ಮಜ್ಞಾನಾನಂದ ಸ್ವಾಮಿಗಳು, ಮಹಾಪೌರರು, ಆಯುಕ್ತರು, ಉಪ ಮಹಾಪೌರರು, ವಾರ್ಡ್‍ನ ನಗರ ಪಾಲಿಕೆಯ ಸದಸ್ಯರುಗಳು ಹಾಗೂ ಶಾಲಾ ಮಕ್ಕಳು / ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: