ಮೈಸೂರು

ಡಾ.ಸಿದ್ದರಾಮಯ್ಯ ಅವರಿಗೆ ಅವಾರ್ಡ್ ಫಾರ್ ರಿಸರ್ಚ್ ಪಬ್ಲಿಕೇಷನ್ಸ್’ ಪ್ರಶಸ್ತಿ

ಮೈಸೂರು,ನ.28:- ಜೆಎಸ್ ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾಪೀಠದ ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಪಾಲಿಮರ್ ಸೈನ್ಸ್ ಅಂಡ್ ಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಸಿದ್ದರಾಮಯ್ಯ ಕರ್ನಾಟಕ ಸರ್ಕಾರದ ವಿಷನ್ ಗ್ರೂಪ್ ಆನ್ ಸೈನ್ಸ್ ಅಂಡ್ ಟೆಕ್ನಾಲಜಿ ಯೋಜನೆಯಲ್ಲಿ 2016-17ನೇ ಸಾಲಿನ ಪ್ರತಿಷ್ಠಿತ ಪ್ರಶಸ್ತಿ ‘ಅವಾರ್ಡ್ ಫಾರ್ ರಿಸರ್ಚ್ ಪಬ್ಲಿಕೇಷನ್ಸ್’ ಪಡೆದಿರುತ್ತಾರೆ.

ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಡ್ ಸೈಂಟಿಫಿಕ್ ರಿಸರ್ಚ್ ನ ಅಧ್ಯಕ್ಷ ಪ್ರೊ.ಸಿ.ಎನ್ ಆರ್ ರಾವ್ ಅಧ್ಯಕ್ಷತೆಯಲ್ಲಿ ವಿಜಿಎಸ್ ಟಿ ಪ್ರಶಸ್ತಿಯನ್ನು ಶಿಪಾರಸ್ಸು ಮಾಡಲಾಗಿತ್ತು. ಡಾ.ಸಿದ್ದರಾಮಯ್ಯ ಕೆಮಿಕಲ್ ಸೈನ್ಸ್ ಕ್ಷೇತ್ರದಲ್ಲಿ ಯಂಗ್ ಸೈಂಟಿಸ್ಟ್ ಅವಾರ್ಡ್-1997 ಹಾಗೂ ಸರ್ ಸಿವಿ ರಾಮನ್ ಯಂಗ್ ಸೈಂಟಿಸ್ಟ್-1999 ಪ್ರತಿಷ್ಟಿತ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: