ಮೈಸೂರು

ವಿಶೇಷ ಚೇತನರ ಹಿತರಕ್ಷಣಾ ವೇದಿಕೆ ಸ್ಥಾಪಿಸಲಾಗುವುದು: ಮಂಜುನಾಥ ಹೇಳಿಕೆ

ರಾಜ್ಯದಲ್ಲಿರುವ ಎಲ್ಲಾ ವಿಕಲಚೇತನರನ್ನು ಒಂದೇ ವೇದಿಕೆಯಡಿ ತಂದು ಅವರಿಗಿರುವ ಹಕ್ಕುಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ  ಕರ್ನಾಟಕ ವಿಶೇಷಚೇತನರ ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ವೇದಿಕೆಯ ಅಧ್ಯಕ್ಷ ಮಂಜುನಾಥ ಹೇಳಿದರು.

ಮೈಸೂರಿನ ಪತ್ರಿಕಾಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಮಾತನಾಡಿ ವಿಕಲಚೇತನರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಮೇಲಧಿಕಾರಿಗಳಿಂದ ವಂಚನೆಗೊಳಗಾಗುತ್ತಿದ್ದಾರೆ. ಸ್ವಾವಲಂಬಿ ಜೀವನ ಮಾಡಲು ಅಗತ್ಯವಿರುವ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿಲ್ಲ. ವಿಕಲಚೇತನರ ಮೇಲೆ ಶೋಷಣೆ, ಅನ್ಯಾಯ, ದೈಹಿಕ ಹಲ್ಲೆ, ಮಾನಸಿಕ ಹಿಂಸೆ, ಅವಮಾನ, ಕೊಲೆ, ಬೆದರಿಕೆ ಅತ್ಯಾಚಾರ ಮುಂತಾದ ಘಟನೆಗಳು ನಡೆಯುತ್ತಿವೆ. ಈ ಎಲ್ಲಾ ಅನ್ಯಾಯಗಳನ್ನು ತೊಡೆದು ಹಾಕಿ ಎಲ್ಲಾ ವಿಕಲಚೇತನರಿಗೂ ಅಗತ್ಯ ಸೌಲಭ್ಯಗಳು ಮತ್ತು ನ್ಯಾಯ ಸಿಗಬೇಕೆಂಬ ಉದ್ದೇಶಕ್ಕಾಗಿ ಈ ವೇದಿಕೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ  ವೇದಿಕೆಯ ಪದಾಧಿಕಾರಿ ಚಂದ್ರನಾಯಕ್ ಉಪಸ್ಥಿತರಿದ್ದರು.

 

Leave a Reply

comments

Related Articles

error: