ಮೈಸೂರು

ವಕೀಲರ ಸಂಘಕ್ಕೆ ಚುನಾವಣೆ

ಮೈಸೂರು ವಕೀಲರ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ಚುನಾವಣೆ ನಡೆಯಿತು.

ಕೋರ್ಟ್ ಆವರಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿತ್ತು. ಗೌರವಯುತ ವ್ಯಕ್ತಿಗೆ ಮತ ನೀಡುವಂತೆ ವಕೀಲರು ತಮ್ಮ ಸಹೋದ್ಯೋಗಿಗಳಲ್ಲಿ ಕೇಳಿಕೊಂಡರು.  ಅಧ್ಯಕ್ಷ ಸ್ಥಾನಕ್ಕೆ  6ಮಂದಿ ಕಣದಲ್ಲಿದ್ದು, ಜಿ.ವಿ.ರಾಮಮೂರ್ತಿ, ಎಂ.ಆರ್.ಆನಂದ, ಆನಂದಕುಮಾರ ಅವರಲ್ಲಿ ತೀವ್ರ ಪೈಪೋಟಿ ನಡೆದಿದೆ.

ಅಧ್ಯಕ್ಷ ಸ್ಥಾನಕ್ಕೆ 6 ಮಂದಿ,  ಉಪಾಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಕ್ಕೆ ಮೂವರು, ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಇಬ್ಬರು, ಮಹಿಳಾ ಅಭ್ಯರ್ಥಿಗೆ ಒಂದು ಸ್ಥಾನ ಮೀಸಲಾಗಿತ್ತು.  2,489 ಮಂದಿ ಮತ ಚಲಾಯಿಸಲು ಅರ್ಹರಾಗಿದ್ದು, ಭಾನುವಾರ ಬೆಳಿಗ್ಗೆ 9ರಿಂದ ಮತ ಚಲಾವಣೆ ನಡೆದಿದ್ದು ನಾಲ್ಕಕ್ಕೆ ಮುಕ್ತಾಯವಾಗಲಿದೆ.

ಸಂಜೆಯ ವೇಳೆಗೆ ವಿಜೇತರಾರೆಂಬುದು ತಿಳಿಯಲಿದೆ.

Leave a Reply

comments

Related Articles

error: