ಸುದ್ದಿ ಸಂಕ್ಷಿಪ್ತ

ಡಿ.1: ಗುಣಮಟ್ಟದ ಪರಿಕಲ್ಪನೆಗಳ ವಿಚಾರವಾಗಿ ರಾಷ್ಟ್ರೀಯ ಸಮಾವೇಶ

ಮೈಸೂರು. ನ. 28:- ಭಾರತೀಯ ಗುಣವೃತ್ತ ವೇದಿಕೆಯ (ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ (ಕ್ಯು.ಸಿ.ಎಫ್.ಐ) ಮೈಸೂರು ಘಟಕವು ಜೆ.ಎಸ್.ಎಸ್. ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ(ಜೆ ಎಸ್ ಎಸ್ ಸೈನ್ಸ್ ಆಂಡ್ ಟೆಕ್ನಾಲಜಿ ಯುನಿವರ್ಸಿಟಿ)ದ ಸಹಯೊಗದೊಂದಿಗೆ ಗುಣಮಟ್ಟದ ಪರಿಕಲ್ಪನೆಗಳ(ಕ್ವಾಲಿಟಿ ಕಾನ್ಸೆಪ್ಟ್ಸ್) ಬಗೆಗಿನ ನಾಲ್ಕು ದಿನಗಳ ರಾಷ್ಟ್ರೀಯ ಸಮಾವೇಶವನ್ನು  ಡಿಸೆಂಬರ್ 1 ರಿಂದ ಮೈಸೂರಿನಲ್ಲಿ  ಆಯೋಜಿಸಿದೆ.

ಕ್ಯು.ಸಿ.ಎಫ್.ಐ ನಿಂದ ಆಯೋಜಿಸಲ್ಪಡುತ್ತಿರುವ 31 ನೇ ರಾಷ್ಟ್ರೀಯ ಸಮಾವೇಶವು ಈ ವರುಷ “ಗುಣಮಟ್ಟದ ಪರಿಕಲ್ಪನೆಗಳು: ಸಮಾಜಕ್ಕಾಗಿ ಮೌಲ್ಯಗಳ ಸೃಷ್ಟಿ ” ಎನ್ನುವ ವಿಷಯವನ್ನಾಧರಿಸಿದ್ದು ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಜೆ.ಎಸ್.ಎಸ್. ಐಟಿ ಕ್ಯಾಂಪಸ್ ನಲ್ಲಿ ನಡೆಯಲಿದೆ.ಮಧ್ಯಮ ಹಾಗೂ ಭಾರೀ ಉದ್ಯಮಗಳ ರಾಜ್ಯ ಸಚಿವ  ಆರ್.ವಿ. ದೇಶಪಾಂಡೆ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಕ್ಯು.ಸಿ.ಎಫ್.ಐ ನ ನಿರ್ದೇಶಕ ಹಾಗೂ ಆಟೋಮೊಟಿವ್ ಆಕ್ಸೆಲ್ಸ್ ಲಿಮಿಟೆಡ್ ನ ಪೂರ್ಣಾವಧಿ ನಿರ್ದೇಶಕ (ಹೋಲ್ ಟೈಮ್ ಡೈರೆಕ್ಟರ್)  ಡಾ. ಎನ್. ಮುತ್ತುಕುಮಾರ್   ಕುರಿತು ಮಾಹಿತಿ ನೀಡಿ  ಈ ರಾಷ್ಟ್ರೀಯ ಸಮಾವೇಶದಲ್ಲಿ ದೇಶದಾದ್ಯಂತದಲ್ಲಿನ ಸುಮಾರು 540 ಸಂಸ್ಥೆಗಳು ಭಾಗವಹಿಸಲಿದ್ದು, ಸರಿಸುಮಾರು 1750 ವಿಷಯಾಧ್ಯನಗಳ ಪ್ರಸ್ತುತಿಗಳ ಜೊತೆಗೆ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡ ಸುಮಾರು10,೦೦೦ ಪ್ರತಿನಿಧಿಗಳು ಹಾಗೂ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ವಿಜೇತರಾದವರು ಸಿಂಗಪೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗುವರು ಎಂದು ತಿಳಿಸಿದರು. ಅಲ್ಲದೇ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಈ ನಾಲ್ಕು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಅರ್ಹತೆ ಪಡೆದ, ದೇಶದಾದ್ಯಂತದಲ್ಲಿನ ಉದ್ಯಮಗಳ ಹಲವಾರು ಗುಣವೃತ್ತಗಳ ಭಾಗವಹಿಸುವಿಕೆಯನ್ನು ಇಲ್ಲಿ ವೀಕ್ಷಿಸಬಹುದಾಗಿದೆ. ಸುಮಾರು 16೦೦ ತಂಡಗಳು ಭಾಗವಹಿಸಲಿದ್ದು 95೦೦ ಕ್ಕೂ ಹೆಚ್ಚು ಸದಸ್ಯರು ಈ ಕಾರ್ಯಕ್ರಮವನ್ನು ವೀಕ್ಷಿಸಲು ನೋಂದಾಯಿಸಿಕೊಂಡಿದ್ದಾರೆ.

ನಾಲ್ಕು ದಿನಗಳ ಈ ಕಾರ್ಯಕ್ರಮವನ್ನು ಒಳಗೊಂಡಿರುವ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳು ಇಂತಿವೆ; ಗುಣಮಟ್ಟ ಪರಿಕಲ್ಪನೆಗಳ ವಿಷಯಾಧ್ಯಯನದ ಬಗೆಗಿನ ಪ್ರಸ್ತುತಿ, ಜ್ಞಾನ ಪರೀಕ್ಷೆ, ಕೈಜ಼ನ್(ಸಣ್ಣ ಸುಧಾರಣೆ) ಪ್ರದರ್ಶನ, ಮಾದರಿಗಳ ಪ್ರದರ್ಶನಗಳಿವೆ, (ಜಿ.ಕೆ,ಎಸ್.ಎಚ್)

Leave a Reply

comments

Related Articles

error: