ಮೈಸೂರು

ಗನ್ ಮ್ಯಾನ್ ಸೇರಿ 6 ಮಂದಿ ದರೋಡೆಕೋರರಿಗೆ ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ಆದೇಶ

ಮೈಸೂರು,ನ.28:-    ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ತಮ್ಮ ಸಂಸ್ಥೆಯ ಹಣವನ್ನು ಎಗರಿಸಲು ಸಹಾಯ ಮಾಡಿದ್ದ ಗನ್ ಮ್ಯಾನ್ ಸೇರಿ 6 ಮಂದಿ ದರೋಡೆಕೋರರಿಗೆ ಮೈಸೂರಿನ 2ನೇ ಜಿಲ್ಲಾ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.

ಜಿ-4 ಸೆಕ್ಯೂರಿಟಿ ಗನ್ ಮ್ಯಾನ್ ಸುರೇಶ್, ಇವರ ಸ್ನೇಹಿತರಾದ ಗೋಪಾಲ್, ಪ್ರವೀಣ್, ಜಗದೀಶ್ ಮನುಕುಮಾರ್, ಪ್ರಭಾಕರ್, ಹಾಗೂ ಶ್ರೀನಿವಾಸ್ ಶಿಕ್ಷೆಗೆ ಒಳಗಾದವರು. ಮೇಟಗಳ್ಳಿ ಠಾಣೆಯ ಸಮೀಪದಲ್ಲಿ ದೋಚಿದ್ದ ಬರೋಬ್ಬರಿ 70 ಲಕ್ಷ ಹಣದ ಕೇಸ್ ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಜಿ-4 ಸೆಕ್ಯೂರಿಟಿ ಎಟಿಎಂ ಗಳಿಗೆ ಹಣ ತುಂಬುವ ಏಜೆನ್ಸಿಯಾಗಿದ್ದು, ತನ್ನ ಸಂಸ್ಥೆ ಜಿ-4 ನಲ್ಲಿ ಹಣ ದೋಚಲು ಗನ್ ಮ್ಯಾನ್ ಐನಾತಿ ಸುರೇಶ್ ಕೀ ಎಗರಿಸಿದ್ದ. ನಂತರ ತನ್ನ ಆರು ಸ್ನೇಹಿತರಿಗೆ ಹಣದ ಬಗ್ಗೆ ಇಂಚಿಂಚೂ ಮಾಹಿತಿ ನೀಡಿದ್ದ. ಈ ನಡುವೆ ಕೈಯಲ್ಲಿ ಗನ್ ಇದ್ದರೂ ಕಂಬಕ್ಕೆ ಹಗ್ಗ ಕಟ್ಟಿಸಿಕೊಂಡು ಸುರೇಶ್ ಹಣಕಳ್ಳತನ ಮಾಡಲು ತನ್ನ ಸ್ನೇಹಿತರಿಗೆ ಸಹಾಯ ಮಾಡುವ ಮೂಲಕ ಹೈ ಡ್ರಾಮಾ ನಡೆಸಿದ್ದ.

ಬೆಳಗಾದ ಬಳಿಕ ತಾನೇ ಠಾಣೆಗೆ ತೆರಳಿ ದೂರು ನೀಡಿ ನಾನು ಸಾಚ ಅಂತಾ ಪ್ರೂ ಮಾಡಲು ಸುರೇಶ್ ಪ್ಲಾನ್ ಮಾಡಿದ್ದ. ಅಂದು ಐಸಿಐಸಿಐ ಬ್ಯಾಂಕ್ ನಲ್ಲಿ 70 ಲಕ್ಷ ಹಣ ಡ್ರಾ ಮಾಡಿ ಮೈಸೂರು ನಗರದ ಎಟಿಎಂ ಗಳಿಗೆ ತುಂಬಲು ಜಿ-4 ಸೆಕ್ಯೂರಿಟಿ ಹೆಡ್ ಆಫೀಸ್ ನಲ್ಲಿ ಇಡಲಾಗಿತ್ತು. ಈ ವೇಳೆ ಗನ್ ಮ್ಯಾನ್ ಸುರೇಶ್ ಜೊತೆ ಕೆಲಸ ಮಾಡುತ್ತಿದ್ದ  ಸೆಕ್ಯೂರಿಟಿ ವಿನೋದ್ ರಾತ್ರಿ ಪಾಳಿ ಕೆಲಸ ಮಾಡಿದ್ದರು. ತದ ನಂತರ ಆಗಸ್ಟ್ 3ರಂದು 2008ರ ರಾತ್ರಿ ಖದೀಮರು 70 ಲಕ್ಷ ಹಣ ದೋಚಿದ್ದರು. ಪ್ರಕರಣ ಸಂಬಂಧ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದರು.ಈ ಕುರಿತು ಇಂದು ಮೈಸೂರಿನ 2ನೇ ಜಿಲ್ಲಾ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯ ವಿಚಾರಣೆ ನಡೆಯಿತು. ವಿನೋದ್ ಪೊಲೀಸರಿಗೆ ದರೋಡೆ ಬಗ್ಗೆ ಸುಳಿವು ನೀಡಿ, ಸುರೇಶ್ ಬಳಿ ಲೊಡೆಡ್ ಗನ್ ಇದ್ದರೂ ಕಳ್ಳತನ ಮಾಡುವಾಗ ಯಾಕೆ ಬಳಸಿಲ್ಲಾ ಎಂದು ಮೇಟಗಳ್ಳಿ ಪೊಲೀಸರನ್ನು ಪ್ರಶ್ನೆ ಮಾಡಿದರು. ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ವಿಜಯ್ ಕುಮಾರ್ ಎಂದು ಆನಂದಶೆಟ್ಟಿ ಅವರು ಇಂದು ಶಿಕ್ಷೆ ಪ್ರಕಟಿಸಿದ್ದಾರೆ. ಡಿಸೆಂಬರ್ 2 ಕ್ಕೆ ಶಿಕ್ಷೆ ಪ್ರಮಾಣವನ್ನು ನ್ಯಾಯಾಲಯ ಕಾಯ್ದಿರಿಸಿದೆ. ಸರ್ಕಾರಿ ಅಭಿಯೋಜಕ ಆನಂದ್ ಕುಮಾರ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: