ಮೈಸೂರು

ಬೆಟ್ಟದ ನಂದಿಗೆ ಮಹಾಭಿಷೇಕ

ಮೈಸೂರಿನ ಬೆಟ್ಟದ ಬಳಗದ ವತಿಯಿಂದ ಭಾನುವಾರ ಚಾಮುಂಡಿ ಬೆಟ್ಟದಲ್ಲಿರುವ ನಂದಿಗೆ ಮಹಾಭಿಷೇಕ ನಡೆಯಿತು.

ಮಹಾಭಿಷೇಕವನ್ನು ಬೆಟ್ಟದ ಬಳಗ ಅಂದರೆ ಚಾಮುಂಡಿ ಬೆಟ್ಟಕ್ಕೆ ಮುಂಜಾನೆ ನಡೆದುಕೊಂಡು ಹೋಗುವ ಜನರ ತಂಡವು ಆಯೋಜಿಸಿತ್ತು.

15ಅಡಿ ಎತ್ತರದ ನಂದಿ ವಿಗ್ರಹಕ್ಕೆ ಮಹಾಭಿಷೇಕ ನಡೆಸಲಾಯಿತು. ನೂರಾರು ಜನರು ಈ ಮಹಾಸನ್ನಿವೇಶಕ್ಕೆ ಸಾಕ್ಷಿಯಾದರು. ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನಂದಿ ವಿಗ್ರಹಕ್ಕೆ ವಿವಿಧ ದ್ರವ್ಯಗಳಿಂದ ಮಹಾಭಿಷೇಕ ಮಾಡಲು ತಿಳಿಸಿದ್ದು, ಇದೀಗ ಈ ಮಹಾಭಿಷೇಕ 8ನೇ ವರ್ಷವನ್ನು ಪೂರೈಸಿದೆ.

350 ವರ್ಷಗಳಷ್ಟು ಹಳೆಯದಾದ ನಂದಿ ವಿಗ್ರಹಕ್ಕೆ ಎಳನೀರು, ಹಾಲು, ಮೊಸರು, ಮಜ್ಜಿಗೆ, ಶ್ರೀಗಂಧ, ಕುಂಕುಮ, ತುಪ್ಪ, ಜೇನುತುಪ್ಪ ಸೇರಿದಂತೆ 32 ರೀತಿಯ ದ್ರವಗಳಿಂದ ಅಭಿಷೇಕ ನೆರವೇರಿಸಲಾಯಿತು. ಬಳಿಕ ಹೂಗಳಿಂದ ನಂದಿ ವಿಗ್ರಹವನ್ನು ಅಲಂಕರಿಸಲಾಯಿತು.

Leave a Reply

comments

Related Articles

error: