
ಮೈಸೂರು
ಮುಂದುವರಿದ ಪಕ್ಷಾಂತರ ಪರ್ವ : ಜೆಡಿಎಸ್ ಸೇರ್ಪಡೆ
ಮೈಸೂರು,ನ.30:-ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಮುಂದುವರಿದಿದೆ. ಕಾಂಗ್ರೆಸ್ ಹಲವರು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಬೆಳವಾಡಿ ಗ್ರಾಮದ ಮೈಸೂರು ಜಿಲ್ಲಾ ಸಿದ್ದರಾಮಯ್ಯನವರ ಅಭಿಮಾನಿಗಳ ಸಂಘದ ಅಧ್ಯಕ್ಷ, ಡಿ.ಸಿ.ಸಿ.ಕಾರ್ಯದರ್ಶಿ, ಮಾಜಿ ಚೇರಮನ್ ಪಾಪೇಗೌಡರ ಪುತ್ರ ಗ್ರಾ.ಪಂ.ಸದಸ್ಯ ಮೋಹನ್ ಬೆಳವಾಡಿ ಸೇರಿದಂತೆ ಹಲವರು ಜೆಡಿಎಸ್ ಗೆ ಸೇರ್ಪಡೆಗೊಂಡರು.
ಹಿರಿಯ ಕಾಂಗ್ರೆಸ್ ಮುಂಖಡರಾದ ಪಿ.ಎಲ್.ಡಿ.ಬ್ಯಾಂಕ್ ಶಿವಣ್ಣ, ಕಿರ್ಲೋಸ್ಕರ ಶಿವರಾಮು ಹಾಗೂ ಅಂಗಡಿ ಮರಿಸ್ವಾಮಿಗೌಡ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರಿದ್ದು, ಶಾಸಕ ಜಿ.ಟಿ.ದೇವೇಗೌಡ ಅವರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. (ಕೆ.ಎಸ್,ಎಸ್.ಎಚ್)