ಮೈಸೂರು

ರಾಷ್ಟ್ರಮಟ್ಟ ಮೊಹಿ-ತೈ ಮೊಹಿಬೊರನ್ ಚಾಂಪಿಯನ್ ಶಿಫ್ ವಿಜೇತರು

ಮೈಸೂರು, ನ. 30 : ಕಿಮೂರು ಮಾರ್ಷಲ್ ಆರ್ಟ್ಸ್ ಅಂಡ್ ಫಿಟ್ ನೆಸ್ ‘ ಕ್ಲಬ್ ಕ್ರೀಡಾಪಟುಗಳು ಮೇಘಾಲಯದ ಶಿಲಾಂಗ್ ನಲ್ಲಿ ನಡೆದ 3ನೇ ರಾಷ್ಟ್ರೀಯಮಟ್ಟದ ಮೊಹಿ-ತೈ ಮೊಹಿಬೊರನ್ ಚಾಂಪಿಯನ್ ಶಿಫ್ ಮತ್ತು 2ನೇ ರಾಷ್ಟ್ರೀಯಮಟ್ಟದ ಪ್ರೋ-ಏಮ್ ಮೊಹಿ-ತೈ ಟೈಟಲ್ ಬೆಲ್ಟ್ ಚಾಂಪಿಯನ್ ಷಿಪ್ ನಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದು ಇದರೊಂದಿಗೆ ರಾಜ್ಯದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ತಂಡದ ತರಬೇತಿದಾರ ಹರೀಶ್ ಎಸ್.ಗೌಳಿ, ನವೀನ್, ಇವರೊಂದಿಗೆ ಬೆಳ್ಳಿ ಪದಕ ವಿಜೇತರಾದ ಪುನೀತ.ಪಿ, ಚೇತನ್, ಜೆಸ್ಸಿಕ್, ದರ್ಶನ್, ರಿತೀಷ್ ಗೌಡ, ಸ್ವರ್ಣ ಪದಕ ವಿಜೇತರಾದ ಜಸ್ವಂತ್, ಸೂರಜ್ ಸಾಮಸಸ್, ಎ.ಎಮ್.ಅರ್ಜುನ್, ಪ್ರಜ್ವಲ್ ದೀಪ್, ಮಿಯಲ್ ನಾರಾಯಣ (ಕಂಚು) ಇವರೊಂದಿಗೆ ತಂಡದ ಮುಖ್ಯಸ್ಥ ಸವಿತ ಗೌಡ,  ಎಂ.ಬಿ.ಎ.ಐ ಅಧ್ಯಕ್ಷ ಪ್ರಸಂಜಿಂತ್ ಸಿಂಗ್, ಕಾರ್ಯದರ್ಶಿ ಶಕ್ಷಿ ಸಾಮ್ಯಾಲ್ ಮೊದಲಾದವರು ಇದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: