ಮೈಸೂರು

ಶಿಕ್ಷಕರು ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರು : ಪ್ರೊ. ಪಿ ವೆಂಕಟರಾಮಯ್ಯ

ಮೈಸೂರು,ನ.30:- ಮೈಸೂರು ನಗರದ ಬಿಎನ್ ರಸ್ತೆಯ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶವು ಕಾಲೇಜಿನ ಪದವಿ ಮತ್ತು ಸ್ನಾತಕೋತ್ತರ ಅಧ್ಯಾಪಕರುಗಳಿಗೆ ಯುಜಿಸಿ ಪ್ರಾಯೋಜಿತ ಒಂದು ದಿನದ ಓರಿಯಂಟೇಷನ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಪಿ ವೆಂಕಟರಾಮಯ್ಯ ಉದ್ಘಾಟಿಸಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವುದು ಅತ್ಯಗತ್ಯ ಎಂದು ತಿಳಿಸಿದರು. ಈ ಸಮಾಜದಲ್ಲಿ ಕ್ಷಣಕ್ಷಣದ ಬದಲಾವಣೆಗಲು ಎಲ್ಲಾ ಕ್ಷೇತ್ರಗಳಲ್ಲಿ ಕಂಡುಬರುತ್ತಿದ್ದು, ಅದು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಹೇಗೆ ಉಪಯುಕ್ತವಾಗುತ್ತದೆ ಎಂದು ವಿವರಿಸಿದರು. ಅಧ್ಯಾಪಕರುಗಳಿಗೆ ಪುಸ್ತಕ ಓದುವ ಹವ್ಯಾಸವು ಅವಶ್ಯಕ ಮತ್ತು ಅದರ ಸಾರವನ್ನು ತಮ್ಮ ಬೋಧನೆಯಲ್ಲಿ ಹೇಗೆ ಅಳವಡಿಸುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಎಸ್‍ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪನವರು ಸಂಶೋಧನೆ, ಶೈಕ್ಷಣಿಕ ಗುಣಮಟ್ಟ ಮತ್ತು ತಂತ್ರಜ್ಞಾನ ಅಳವಡಿಸಿ ಶಿಕ್ಷಣ ನೀಡುವುದರ ಬಗ್ಗೆ ಅತ್ಯಂತ ಸರಳವಾಗಿ ತಿಳಿಸಿ ಹಾಗೂ ಇವುಗಳ ಸೂಕ್ಷ್ಮತೆಗಳನ್ನು ಕಾಪಾಡುವುದು ಶಿಕ್ಷಣ ಸಂಸ್ಥೆಗಳ ಅವಿಭಾಜ್ಯ ಅಂಗವಾಗಿರುತ್ತದೆ.  ಶಿಕ್ಷಕರು ಅಧ್ಯಯನ ಶೀಲರಾಗಿರಬೇಕು ಹಾಗೂ ಸ್ವಸಾಮರ್ಥ್ಯರಾಗಿರಬೇಕು ಎಂದು ಅಭಿಪ್ರಾಯಪಟ್ಟರು. ನಂತರ ಅವರ ಭಾಷಣದಲ್ಲಿ ಶಿಕ್ಷಕರು ಹೇಗೆ ಚಿಂತನಾತ್ಮಕ ಹಾಗೂ ಸಂಶೋಧನಾತ್ಮಕವಾಗಿರಬೇಕು ಎಂದು ತಿಳಿಸಿದರು.
ಡಾ. ಎಂ.ಸಿ. ಸರೋಜಮ್ಮಣ್ಣಿ, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ,ಪ್ರಾಂಶುಪಾಲರಾದ ಪ್ರೊ. ಎಂ. ಮಹದೇವಪ್ಪ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ. ಬಿ ಕೆ ಕೆಂಡಗಣ್ಣಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಆರ್ ಸುಹಾಸ್‍ರವರು ನಿರೂಪಿಸಿದರು. ಕಾಲೇಜಿನ 150ಕ್ಕೂ ಹೆಚ್ಚು ಬೋಧನಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: