ಕರ್ನಾಟಕ

ಕಿರಿಯ ಪ್ರಯೋಗಶಾಲಾ ಹುದ್ದೆಯ ತಾತ್ಕಾಲಿಕ ಪಟ್ಟಿ ಪ್ರಕಟ : ಆಕ್ಷೇಪಣೆಗಳಿಗೆ ಆಹ್ವಾನ

ಮಂಡ್ಯ (ಡಿ.1): ರಾಷ್ಟ್ರೀಯ ಉಚಿತ ರೋಗ ಪತ್ತೆ ಸೇವೆಗಳು ಕಾರ್ಯಕ್ರಮದಡಿಯಲ್ಲಿ ಕಿರಿಯ ಪ್ರಯೋಗಶಾಲಾ ತ್ರಂತ್ರಜ್ಞರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿದ್ದು ಈಗಾಗಲೇ ಜುಲೈ 15 ರಂದು ನೆಡೆದ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಿದ್ದು ಎಲ್ಲಾ ವಿವಿಧವಾದ ಮೂಲ ದಾಖಲೆಗಳನ್ನು ಸಲ್ಲಿಸಿದ ಆಭ್ಯರ್ಥಿಗಳನ್ನು ಸೆಪ್ಟೆಂಬರ್ 12 ರಂದು ನಡೆದ ಕೌಶಲ್ಯ ಸಾಮಥ್ರ್ಯ ಹಾಗೂ ಕಂಪ್ಯೂಟರ್ ಪರೀಕ್ಷೆಯಲ್ಲಿ ಅರ್ಹರನ್ನು ಪಟ್ಟಿ ಮಾಡಲಾಗಿತ್ತು ಅದರಲ್ಲಿ 36 ಅಭ್ಯರ್ಥಿಗಳನ್ನು ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ತಯಾರಿಸಲಾಗಿದೆ.

ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಡಿಸೆಂಬರ್ 5 ರೊಳಗೆ ಸಲ್ಲಿಸಬಹುದು. ಹಾಗೂ 10 ಅಭ್ಯರ್ಥಿಗಳನ್ನು ರೋಸ್ಟರ್ ಕಂ ಮೆರಿಟ್ ಆಧಾರದ ಮೇಲೆ ಕಾಯ್ದಿರಿಸಿದ ಪಟ್ಟಿಯನ್ನು ತಯಾರಿಸಿ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ತಿಳಿಸಿದ್ದಾರೆ.

(ಎನ್‍ಬಿಎನ್‍)

Leave a Reply

comments

Related Articles

error: