ದೇಶಪ್ರಮುಖ ಸುದ್ದಿ

ನಮ್ಮದು ಶಿವಭಕ್ತ ಕುಟುಂಬ ,ಧರ್ಮದ ಕುರಿತು ನಾವು ದಳ್ಳಾಳಿ ನಡೆಸುವುದಿಲ್ಲ : ರಾಹುಲ್ ಗಾಂಧಿ

ದೇಶ(ನವದೆಹಲಿ)ಡಿ.1:- ರಾಹುಲ್ ಗಾಂಧಿಯವರ ಧರ್ಮದ ಕುರಿತು ಚರ್ಚೆ ನಡೆಯುತ್ತಿರುವಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿ ನಮ್ಮದು ಶಿವಭಕ್ತ ಕುಟುಂಬ. ಆದರೆ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಬಳಸುವುದಿಲ್ಲ ಎಂದಿದ್ದಾರೆ.

ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ರಾಹುಲ್ ನಮಗೆ ಧರ್ಮದ ಕುರಿತು ಯಾರ  ಸರ್ಟಿಫಿಕೇಟ್ ಅವಶ್ಯಕತೆಯಿಲ್ಲ. ಮತ್ತು ನಾವು ಧರ್ಮದ ಕುರಿತು ಯಾವುದೇ ದಳ್ಳಾಲಿ ನಡೆಸುವುದಿಲ್ಲ ಎಂದಿದ್ದಾರೆ. ನನ್ನ ಅಜ್ಜಿ ಮತ್ತು ನಮ್ಮ ಕುಟುಂಬ. ಶಿವಭಕ್ತರಾಗಿದ್ದೇವೆ, ಆದರೆ ನಾವು ಇದನ್ನೆಲ್ಲ ಖಾಸಗಿಯಾಗಿ ಇರಿಸಿದ್ದೇವೆ.  ಸಾಮಾನ್ಯವಾಗಿ ನಾವು ಇದರ ಬಗ್ಗೆ ಮಾತನಾಡುವುದಿಲ್ಲ. ಇದು ತುಂಬಾ ವೈಯುಕ್ತಿಕ ವಿಷಯ ಎಂದು ನಾವು ತಿಳಿದಿದ್ದೇವೆ. ನಮಗೆ ಇದರ ಕುರಿತು ಯಾರ ಸರ್ಟಿಫಿಕೇಟ್ ಅವಶ್ಯಕತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಇದನ್ನು  ವ್ಯಾಪಾರ ಮಾಡಲು ಬಯಸುವುದಿಲ್ಲ. ಇದಕ್ಕಾಗಿ ದಳ್ಳಾಳಿ ಕೆಲಸವನ್ನೂ ಮಾಡುವುದಿಲ್ಲ. ಇದನ್ನು ರಾಜಕೀಯ ಲಾಭಕ್ಕಾಗಿಯೂ ಬಳಸುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಮುಖಂಡರು ಈ ಮಾತಿನ ವಿಡಿಯೋವನ್ನು ಅಲ್ಲಿನ ಸ್ಥಳೀಯ, ಹಾಗೂ ರಾಷ್ಟ್ರೀಯ ವಾಹಿನಿಗಳಿಗೆ ನೀಡಿದ್ದಾರೆ.  ಎನ್ನಲಾಗಿದೆ. ದೇವಳದ ಅರ್ಚಕರು ರಾಹುಲ್ ಗಾಂಧಿ ಅವರ ಹಣೆಗೆ ತಿಲಕವನ್ನಿಟ್ಟರು. (ಎಸ್.ಎಚ್)

Leave a Reply

comments

Related Articles

error: